ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದೆಗೆ 72 ವರ್ಷಗಳ ಬಳಿಕ ಪೂಜೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದೆಯ ದೇವಸ್ಥಾನಕ್ಕೆ ಬರೋಬ್ಬರಿ 72 ವರ್ಷಗಳ ಬಳಿಕ ಪೂಜೆ ಮಾಡಲಾಗಿದೆ. ಹಾಂಗ್‍ಕಾಂಗ್‍ನಿಂದ ಆಗಮಿಸಿರುವ ಭಾರತೀಯ ಮೂಲದ ದಂಪತಿ ವೆಂಕಟರಮಣ್ ಮತ್ತು ಸುಜಾತ ದಂಪತಿ ಈ ಪೂಜೆ ಮಾಡಿದ್ದಾರೆ. ಆದ್ರೆ ಇವರು ಭಾರತ ಮೂಲದವರಾಗಿದ್ದರಿಂದ ಮೊದಲಿಗೆ ಪಾಕಿಸ್ತಾನ ಇವರನ್ನು ತಡೆದಿತ್ತು. ನಂತರದಲ್ಲಿ ಕೆಲವು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅನುಮತಿ ನೀಡಿದೆ. ಈಗಾಗಲೇ ನಾಶವಾಗಿ ಕೇವಲ ಅವಶೇಷಗಳ ರೂಪದಲ್ಲಿ ಉಳಿದಿರೋ ಈ ಮಂದಿರದವರೆಗೆ ತಲುಪಲು ವೆಂಕಟರಮಣ್ ಮತ್ತು ಸುಜಾತ ದಂಪತಿಗೆ ತುಂಬಾ ಕಷ್ಟವಾಯ್ತು.

ಪಿಒಕೆಯಲ್ಲಿರುವ ಈ ದೇವಸ್ಥಾನದ ಬಗ್ಗೆ ಈ ದಂಪತಿಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಸಿಕ್ಕಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ದೇಶ ಇಬ್ಭಾಗವಾದ ನಂತರ ಶಾರದ ಮಂದಿರಕ್ಕೆ ಯಾರೂ ಹೋಗಿರಲಿಲ್ಲ. ಈ ದಂಪತಿ ಟ್ವಿಟ್ಟರ್ ಮೂಲಕ ಸೇವಾ ಶಾರದ ಸಮಿತಿಯ ಸಂಸ್ಥಾಪಕ ರವೀಂದ್ರ ಪಂಡಿತ್ ಎಂಬುವರಿಂದ ಮಾಹಿತಿ ಪಡೆದಿದ್ದರು.

Contact Us for Advertisement

Leave a Reply