ಭಾರತದ ಶ್ರೀಮಂತರ ಪಟ್ಟಿ ಹೀಗಿದೆ.. ಹೆಚ್ಚು ಶ್ರೀಮಂತ ಯಾರು ಗೊತ್ತಾ..?

ಫೋಬ್ರ್ಸ್ ಭಾರತದ 100 ಮಂದಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರಂತರವಾಗಿ 12 ವರ್ಷಗಳಿಂದ ಮೊದಲ ಸ್ಥಾನದಲ್ಲಿರುವ ರಿಲಾಯನ್ಸ್ ಇಂಡಸ್ಟ್ರೀ ಮಾಲೀಕ ಮುಖೇಶ್ ಅಂಬಾನಿ ಈ ಬಾರಿಯೂ ಮೊದಲ ಸ್ಥಾನ ಪಡೆದಿದ್ದಾರೆ. ಮುಖೇಶ್ ಅಂಬಾನಿ ಒಟ್ಟು 51.4 ಬಿಲಿಯನ್ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ 5,140 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಇನ್ನು 1,570 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಗೌತಮ್ ಅದಾನಿ 2ನೇ ಸ್ಥಾನದಲ್ಲಿದ್ದರೆ, 1,560 ಕೋಟಿ ರೂಪಾಯಿ ಇರೋ ಹಿಂದುಜಾ ಬ್ರದರ್ಸ್ 3ನೇ ಸ್ಥಾನದಲ್ಲಿದ್ದಾರೆ. 4ನೇ ಸ್ಥಾನದಲ್ಲಿ ಪಿ.ಮಿಸ್ತ್ರಿ, 5ನೇ ಸ್ಥಾನದಲ್ಲಿ ಉದಯ್ ಕೋಟಕ್, 6ನೇ ಸ್ಥಾನದಲ್ಲಿ ಶಿವ್ ನಾದರ್, 7ನೇ ಸ್ಥಾನದಲ್ಲಿ ರಾಧಾಕೃಷ್ಣನ್ ಧಮಾನಿ, 8ನೇ ಸ್ಥಾನದಲ್ಲಿ ಗೋದ್ರೇಜ್ ಫ್ಯಾಮಿಲಿ, 9ನೇ ಸ್ಥಾನದಲ್ಲಿ ಲಕ್ಷ್ಮೀ ಮಿತ್ಥಲ್ ಮತ್ತು 10ನೇ ಸ್ಥಾನದಲ್ಲಿ ಕುಮಾರ್ ಬಿರಲಾ ಇದ್ದಾರೆ.

Contact Us for Advertisement

Leave a Reply