ಟ್ವಿಟ್ಟರ್‍ನಲ್ಲಿ ಅರ್ಧ ಗಂಟೆ ಕ್ರಿಮಿನಲ್ ಆದ ಶೇನ್ ವಾಟ್ಸನ್..!

ಆಸ್ಟ್ರೇಲಿಯಾ ಮಾಜಿ ಆಟಗಾರ ಶೇನ್ ವಾಟ್ಸನ್ ಆವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಅವರ ಖಾತೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ಅಲ್ಲದೆ ಅವರ ಪ್ರೊಫೈಲ್ ಫೋಟೋ ಕೂಡ ಚೇಂಜ್ ಮಾಡಿ, ಹೆಸರು ಕೂಡ ಬದಲಿಸಲಾಗಿತ್ತು.

ಸುಮಾರು ಅರ್ಧ ಗಂಟೆಗಳ ಕಾಲ ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು ಹಲವು ಟ್ವೀಟ್‍ಗಳನ್ನು ಮಾಡಿದ್ದಾರೆ. ಬೊಜ್ಜು, ಹಣ ಹೀಗೆ ಹಲವು ವಿಷಯಗಳ ಬಗ್ಗೆ ಅಸಮಂಜಸವಾಗಿ ಟ್ವೀಟ್ ಮಾಡಲಾಗಿದೆ. ಕೊನೆಗೆ ಶೇನ್ ವ್ಯಾಟ್ಸನ್ ಹೆಸರು ಕೂಡ ಚೇಂಜ್ ಮಾಡಿ ಕ್ರಿಮಿನಲ್ ಎಂದು ಹಾಕಲಾಗಿತ್ತು.

ಇದನ್ನು ಗಮನಿಸಿದ ಅಭಿಮಾನಿಗಳು ಶೇನ್ ವ್ಯಾಟ್ಸನ್ ಟ್ವಿಟ್ಟರ್ ಹ್ಯಾಕ್ ಆಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಅಸಮಂಜಸ ಕಮೆಂಟ್‍ಗಳಿಗೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

ನಂತರ ಟ್ವಿಟ್ಟರ್ ಸರಿಪಡಿಸಿಕೊಂಡ ಬಳಿಕ ಟ್ವೀಟ್ ಮಾಡಿರೋ ಶೇನ್ ವ್ಯಾಟ್ಸಮ್, ನನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿತ್ತು. ಅಸಮಂಜಸ ಟ್ವೀಟ್‍ಗಳಿಗೆ ಕ್ಷಮೆಯಾಚಿಸುತ್ತೇನೆ.

Contact Us for Advertisement

Leave a Reply