ಭಾರತೀಯರ ಮೀಮ್‌ ಮಟರೀಯಲ್ ಆದ ಇಮ್ರಾನ್‌ ಖಾನ್‌ ಬಂಟ!

masthmagaa.com:

ತಮ್ಮ ಟ್ವೀಟ್‌ಗಳ ಮೂಲಕ ವಿವಾದಗಳನ್ನ ಸೃಷ್ಟಿ ಮಾಡೊ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಟ ಫವಾದ್‌ ಹುಸ್ಸೇನ್‌ ಮತ್ತೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನ ಹಿಂಪಡೆಯೋಕೆ ಸೇನೆ ಸಿದ್ದವಿದೆ ಅಂತ ಭಾರತೀಯ ಸೇನೆ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಫವಾದ್‌, ಇಂಡಿಯಾವನ್ನ ʻಎಂಡಿಯಾʼ (India into Endia) ಅಂತ ಬದ್ಲಾಯಿಸೋಕೆ ಪಾಕ್‌ಗೆ ಜಾಸ್ತಿ ಟೈಮ್‌ ಬೇಕಾಗಿಲ್ಲ ಅಂತ ಟ್ವೀಟ್‌ ಮಾಡಿದ್ದಾರೆ. ಇವರ ಈ ಟ್ವೀಟ್‌ಗೆ ಪಾಕ್‌ನ ರಾಜಕಾರಣಿಯೊಬ್ರು ರಿಪ್ಲೈ ಮಾಡಿದ್ದು, ಭಾರತ ಏನಾದ್ರೂ POKಯನ್ನ ವಶಪಡಿಸಿಕೊಳ್ಳೋಕೆ ನೋಡಿದ್ರೆ, ಭಾರತವನ್ನ ಕೊನೆಗಾಣಿಸಿ ಸೇಡು ತೀರಿಸಿಕೊಳ್ತೀವಿ ಅಂತ ಹೇಳಿದ್ದಾರೆ. ಇನ್ನು ಇವರ ಟ್ವೀಟ್‌ಗಳಿಗೆ ನೆಟ್ಟಿಗರು ಟೀಕೆಗಳ ಮಳೆಯನ್ನ ಸುರಿದಿದ್ದಾರೆ. ಕೆಲವರು ಪಾಕ್‌ ಸಚಿವರಿಗೆ 1971ರ ಸಂಘರ್ಷವನ್ನ ನೆನಪು ಮಾಡಿದ್ರೆ, ಇನ್ನು ಕೆಲವ್ರು ಪಾಕಿಸ್ತಾನಕ್ಕೆ ಭಾರತಕ್ಕಿಂತ ಹೆಚ್ಚು ಭಯಾನಕ ಶತ್ರುಗಳು ಫವಾದ್‌ ಹಾಗೂ ಇಮ್ರಾನ್‌ ಖಾನ್‌ ಅಂತೇಳಿ ಅವ್ರನ್ನ ಟ್ಯಾಗ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply