ಮಳೆಯಿಂದಾಗಿ ಪೆಟ್ರೋಲ್ ಬಂಕ್​​​​ನಲ್ಲಿ ನೀರು ಮಿಕ್ಸ್!

masthmagaa.com:

ಬೆಂಗಳೂರಲ್ಲಿ ವರುಣನ ಆರ್ಭಟದಿಂದ ಉಂಟಾಗಿರುವ ಸಮಸ್ಯೆ ಒಂದೆರಡಲ್ಲ. ಇದೀಗ ಬೆಂಗಳೂರಿನ ಎಂ ಜಿ ರೋಡ್ನ ಪೆಟ್ರೋಲ್​​ ಬಂಕ್‌ ಒಂದರಲ್ಲಿ ಪೆಟ್ರೋಲ್ಗೆ ಮಳೆ ನೀರು ಮಿಕ್ಸ್‌ ಆಗಿದೆ. ಇದು ಗೊತ್ತಿಲ್ಲದೆ ತಮ್ಮ ವಾಹನಗಳಿಗೆ ಪೆಟ್ರೋಲ್‌ ಹಾಕಿಸಿಕೊಂಡ ಜನರ ವಾಹನಗಳ ಇಂಜಿನ್‌ಗೆ ಸಮಸ್ಯೆ ಆಗಿದೆ. ನಂತ್ರ ಈ ವಿಚಾರ ಗೊತ್ತಾದ ಬಳಿಗೆ ವಾಹನ ಮಾಲೀಕರು ಪೆಟ್ರೋಲ್‌ ಬಂಕ್‌ ಬಳಿ ಬಂದು ಗಲಾಟೆ ಮಾಡಿದ್ದಾರೆ. ಬಂಕ್‌ ಮಾಲಿಕರು ವಾಹನಗಳನ್ನ ರಿಪೇರಿ ಮಾಡಿಸಿಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply