ರಷ್ಯಾ ನಮ್ಮ ಕ್ಲೋಸ್ ಫ್ರೆಂಡು ಎಂದ ಸೌತ್ ಆಫ್ರಿಕಾ! ಈಗೇನ್ಮಾಡುತ್ತೆ ಅಮೆರಿಕ?

masthmagaa.com:

ಜಾಗತಿಕ ರಾಜಕೀಯದಲ್ಲಿ ಅಮೆರಿಕ ಶಕ್ತಿ ಶಾಲಿ ದೇಶ ಅನ್ನೋದು ನಿರ್ವಿವಾದದ ಸಂಗತಿ. ತನ್ನ ವಿರೋಧಿಗಳ ವಿರುದ್ದ ಕೂಟಗಳನ್ನ ರಚಿಸಿಕೊಂಡು ಶತ್ರುವಿನ ಶತ್ರು ಜೊತೆಗೆ ಶತ್ರುವಿನ ಮಿತ್ರನನ್ನೂ ಸಹ ತನ್ನ ಕಡೆಗೆ ಎಳ್ಕೊಂಡು ತನ್ನ ಎನಿಮಿಗಳಿಗೆ ಶಾಕ್‌ ಕೊಡುತ್ತೆ ಅಮೆರಿಕ. ಈಗ ಅದೇ ದಾರಿಯನ್ನ ರಷ್ಯಾನೂ ಹಿಡಿದಿದೆ. ಇಷ್ಟು ದಿನ ಅಮೆರಿಕದ ಶತ್ರುಗಳಾದ ನಾರ್ಥ್‌ ಕೊರಿಯಾ, ಚೀನಾ, ಕ್ಯೂಬಾ ಜೊತೆಗೆ ಉತ್ತಮ ಸಂಬಂಧ ಬೆಳೆಸ್ತಿದ್ದ ರಷ್ಯಾ, ಈಗ ಅಮೆರಿಕ ಮಿತ್ರ ಸೌತ್‌ ಆಫ್ರಿಕಾ ಮೇಲೆ ಕಣ್ಣಿಟ್ಟಿದೆ. ಇದರ ಭಾಗವಾಗಿ ರಷ್ಯಾದ ಉನ್ನತ ಅಧಿಕಾರಿಗಳು ಸೌತ್‌ ಆಫ್ರಿಕಾಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಅಧಿಕಾರಿಗಳ ಜೊತೆಗೆ ಮಾತುಕತೆ ಮಾಡಿದ್ದಾರೆ. ಈ ವೇಳೆ ಸೌತ್‌ ಆಫ್ರಿಕಾದ ವಿದೇಶಾಂಗ ಸಚಿವೆ ಮಾತನಾಡಿದ್ದು, ರಷ್ಯಾ ನಮ್ಮ ಮಿತ್ರ ಅಂತ ಹೇಳಿದಾರೆ. ಅಂದ್ಹಾಗೆ ಮೊನ್ನೆ ತಾನೇ ಚೀನಾ ಹಾಗೂ ರಷ್ಯಾ ಜೊತೆಗೆ ಸೇರ್ಕೊಂಡು ನಾನು ಸಮರಾಭ್ಯಾಸ ಮಾಡ್ತೀನಿ ಅಂತ ಸೌತ್‌ ಆಫ್ರಿಕಾ ಹೇಳಿತ್ತು. ಅದಕ್ಕೂ ಹಿಂದಿನದನ್ನೂ ನೋಡಿದ್ರೆ ಯುಕ್ರೇನ್‌ ಯುಧ್ದಕ್ಕೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ದ ಅಮೆರಿಕ ಹಾಗೂ ಯುರೋಪ್‌ ದೇಶಗಳು ಮಂಡಿಸಿದ ನಿರ್ಣಯಗಳಿಂದ ಸೌತ್‌ ಆಫ್ರಿಕಾ ದೂರ ಉಳಿದಿತ್ತು. ಇದು ಅಮೆರಿಕ ಹಾಗೂ ಅವರ ಮಿತ್ರರ ಕೆಂಗಣ್ಣಿಗೆ ಗುರಿಯಾಗಿತ್ತು. ಆದ್ರೆ ಈಗ ರಷ್ಯಾ ಜೊತೆಗೆ ಮಿಲಿಟರಿ ಅಭ್ಯಾಸ ಮಾಡ್ತೀನಿ ಅಂತ ಹೇಳಿದ್ದಲ್ಲದೇ ಅವರು ನಮ್ಮ ಪ್ರೆಂಡು ಅಂತ ಹೇಳಿರೋದು ಸಂಚಲನಕ್ಕೆ ಕಾರಣವಾಗಿದೆ. ಇತ್ತ ದಕ್ಷಿಣ ಆಫ್ರಿಕಾ ಸರ್ಕಾರದ ಈ ನಡೆಯ ವಿರುದ್ದ ಅಲ್ಲಿನ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ಇದು ನಮ್ಮ ದೇಶ ಕಂಪ್ಲೀಟಾಗಿ ರಷ್ಯಾ ಪರ ನಿಲ್ಲೋ ತರ ಇದೆ ಅಂತ ಹೇಳಿದ್ದಾರೆ.

ಈ ನಡುವೆ ಆ ಕಡೆ ರಷ್ಯಾ, ಯುರೋಪ್‌ ಗುಂಪಿಗೆ ಮತ್ತೊಂದು ಶಾಕ್‌ ಕೊಟ್ಟಿದೆ. ಅಮೆರಿಕದ ಮಿತ್ರ ದೇಶವಾಗಿರೋ ನ್ಯಾಟೋ ಗುಂಪಿನ ಸದಸ್ಯ ಕೂಡ ಆಗಿರೋ ಎಸ್ಟೋನಿಯಾದ ರಾಯಭಾರಿಯನ್ನ ತನ್ನ ದೇಶದಿಂದ ಹೊರಹಾಕೋದಾಗಿ ಹೇಳಿದೆ. ರಷ್ಯಾ ಎಸ್ಟೋನಿಯಾದ ರಾಯಭಾರಿಯನ್ನು ಹೊರಹಾಕುತ್ತಿದೆ…ಎಸ್ಟೋನಿಯನ್ ರಾಯಭಾರಿ ಮಾರ್ಗಸ್ ಲೈಡ್ರೆ ಅವರು ಫೆಬ್ರವರಿ 7 ರೊಳಗೆ ದೇಶವನ್ನು ತೊರೆಯಬೇಕು. ಇನ್ನು ಮುಂದೆ ಎಸ್ಟೋನಿಯಾದ ರಾಜತಾಂತ್ರಿಕ ಸಂಬಂಧವನ್ನ ಮಾಸ್ಕೋದಲ್ಲಿರುವ ಯುರೋಪಿಯನ್ ಯೂನಿಯನ್ ಮಿಷನ್‌ಗೆ ವಹಿಸಲಾಗುತ್ತೆ ಅಂತ ರಷ್ಯಾ ಹೇಳಿಕೆ ಬಿಡುಗಡೆ ಮಾಡಿದೆ.

-masthmagaa.com

Contact Us for Advertisement

Leave a Reply