ರಾಜ್ಯದಲ್ಲಿ ಮೇ 10ರಿಂದ 25ರವರೆಗೆ ಲಾಕ್​ಡೌನ್! ಏನಿದೆ? ಏನಿಲ್ಲ?

masthmagaa.com:

ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಜಾಸ್ತಿ ಏನೂ ಚೇಂಜಸ್ ಮಾಡಿಲ್ಲ.. ಈಗಿರೋ ಲಾಕ್​ಡೌನ್​​ ಮಾರ್ಗಸೂಚಿಯನ್ನೇ ಚೂರು ಚೇಂಜ್ ಮಾಡಿ ಬಿಡುಗಡೆ ಮಾಡಿದೆ ರಾಜ್ಯ ಸರ್ಕಾರ.. ಅದರ ಪ್ರಮುಖ ಅಂಶಗಳು ಇಲ್ಲಿವೆ ನೋಡಿ..

ಲಾಕ್​ಡೌನ್ ಕಂಟಿನ್ಯೂ!
-ಮೇ 10ರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಲಾಕ್​​​
-ಅಂಗಡಿ ಮುಂಗಟ್ಟು ಬಂದ್ (ಅಗತ್ಯ ವಸ್ತುಗಳನ್ನು ಹೊರತುಪಡಿಸಿ)
-ಹೋಟೆಲ್​ಗಳು ಬಂದ್, ಆದ್ರೆ ಪಾರ್ಸೆಲ್​​ಗೆ ಅವಕಾಶ
-ನಡೆದುಕೊಂಡು ಹೋಗಿಯೇ ಪಾರ್ಸೆಲ್ ತರಬೇಕು, ವಾಹನ ಬಳಸುವ ಹಾಗಿಲ್ಲ
– ಪಬ್, ಬಾರ್, ರೆಸ್ಟೋರೆಂಟ್​​​ ಬಂದ್
– ವೈನ್​​ಶಾಪ್​​ಗಳಲ್ಲಿ ಬೆಳಗ್ಗೆ 6ರಿಂದ ಬೆಳಗ್ಗೆ 10ಗಂಟೆರವರೆಗೆ ಪಾರ್ಸೆಲ್​​ಗೆ ಅವಕಾಶ
-ಕೈಗಾರಿಕೆ ಬಂದ್, ಆದ್ರೆ ಆಹಾರಕ್ಕೆ ಸಂಬಂಧಿಸಿದ ಕೈಗಾರಿಕೆಗೆ ಅವಕಾಶ
-ಅಗತ್ಯವಸ್ತುಗಳಿಗೆ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಅವಕಾಶ
-ಆಹಾರ, ಔಷಧಿ, ಹಣ್ಣು-ತರಕಾರಿ, ಮಾಂಸ ಮಾರಾಟಕ್ಕೆ 4 ಗಂಟೆ ಅವಕಾಶ
– ಹಾಲಿನ ಬೂತ್ & ತಳ್ಳೋ ಗಾಡಿಗೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅವಕಾಶ
-ವಾಹನ ಸಂಚಾರ ಬಂದ್, ಕೆಎಸ್​​ಆರ್​​ಟಿಸಿ, ಬಿಎಂಟಿಸಿ, ಮೆಟ್ರೋ ಬಂದ್
-ಆಸ್ಙತ್ರೆ ವೈದ್ಯಕೀಯ ಚಿಕಿತ್ಸೆಗೆ ಜನ ವಾಹನ ಸಂಚಾರಕ್ಕೆ ಅವಕಾಶ ಇದೆ
-ವಿಮಾನ, ರೈಲು ಸಂಚಾರಕ್ಕೆ ಅವಕಾಶ. ಆದ್ರೆ ಟಿಕೆಟ್ಟನ್ನೇ ಪಾಸ್ ರೀತಿ ಬಳಸಬಹುದು
-ಖಾಲಿ, ಗೂಡ್ಸ್ ವಾಹನಗಳ ಸಂಚಾರಕ್ಕೂ ಅನುಮತಿ
– ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ
-ಸರ್ಕಾರಿ ಕಚೇರಿ ಭಾಗಶಃ ಕಾರ್ಯನಿರ್ವಹಣೆ
– ಆರೋಗ್ಯ, ಮಾಧ್ಯಮ, ಸರ್ಕಾರಿ ಅಧಿಕಾರಿಗಳಿಗೆ ಅನುಮತಿ
– ವಿದ್ಯುತ್ಚಕ್ತಿ, ನೀರು ಸರಬರಾಜು, ಟೆಲಿಕಾಂ, ಕೇಬಲ್ ಟಿವಿ ಸಿಬ್ಬಂದಿಗೆ ಅವಕಾಶ
– ಬ್ಯಾಂಕ್ ಮತ್ತು ಇನ್ಶೂರೆನ್ಸ್ ಕಂಪನಿಗಳ ಕಾರ್ಯನಿರ್ವಹಣೆಗೆ ಅವಕಾಶ
-ರಸ್ತೆ ಕಾಮಗಾರಿಗೆ ಅಡ್ಡಿ ಇಲ್ಲ
-ನಿಗದಿತ ಕಟ್ಟಡ ಕಾಮಗಾರಿಗೂ ಅವಕಾಶ
-ವಿವಾಹ ಕಾರ್ಯಕ್ರಮಗಳಲ್ಲಿ 50 ಜನಕ್ಕಿಂತ ಹೆಚ್ಚು ಸೇರಂಗಿಲ್ಲ
– ಅಂತ್ಯ ಸಂಸ್ಕಾರಕ್ಕೆ ಐದೇ ಜನರಿಗೆ ಅವಕಾಶ
-ಜಿಲ್ಲೆಯಿಂದ ಜಿಲ್ಲೆ ಓಡಾಟ ಇರಲ್ಲ
-ಎಲ್ಲಾ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆ ಬಂದ್
-ಕೃಷಿಗೆ ಅವಕಾಶ ಇದೆ
– ಅಂತರ್​​ ರಾಜ್ಯ ಸಂಚಾರ ಬಂದ್, ತುರ್ತು ಸಂದರ್ಭಗಳಲ್ಲಿ ಮಾತ್ರ ಅವಕಾಶ

ಸಿಎಂ ಯಡಿಯೂರಪ್ಪ ಹೇಳಿದ್ದೇನು?
-ಈವರೆಗಿನ ಲಾಕ್​ಡೌನ್​ನಿಂದ ಕೊರೋನಾ ತಡೆ ಸಾಧ್ಯವಾಗಿಲ್ಲ
-ಸರ್ಕಾರದ ಮಾರ್ಗಸೂಚಿಯನ್ನು ರಾಜ್ಯದ ಜನ ಕಡ್ಡಾಯವಾಗಿ ಪಾಲಿಸಬೇಕೆಂದು ವಿನಂತಿಸುತ್ತೇನೆ
-ಸೋಂಕು ಹರಡೋದನ್ನು ತಡೆಯಲು ಇದು ತಾತ್ಕಾಲಿಕ ಕ್ರಮ
-ಬೆಂಗಳೂರಿನ ಜನ ಹಳ್ಳಿಗೆ ಹೋಗಬೇಡಿ, ಕಾರ್ಮಿಕರು ಭಯ ಪಡೋ ಅಗತ್ಯವಿಲ್ಲ
-masthmagaa

Contact Us for Advertisement

Leave a Reply