ಭಾರತದ ಯೋಧರಿಗೆ ತ್ರಿಶೂಲ, ವಜ್ರಾಯುಧ!

masthmagaa.com:

ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರು ಹೊಡೆದಾಡಿಕೊಂಡಾಗ ಚೀನಾ ಯೋಧರು ರಾಡ್​​, ಚೂಪಾದ ಆಯುಧಗಳನ್ನ ಬಳಸಿದ್ದರು. ಇದರ ಬೆನ್ನಲ್ಲೇ ಭಾರತೀಯ ಸೇನೆ ಕೂಡ ಚೀನಾ ಯೋಧರೊಂದಿಗೆ ಹೋರಾಡಲು ಅಸ್ತ್ರಗಳನ್ನ ಮಾಡಿಕೊಡುವಂತೆ ನೋಯ್ಡಾ ಮೂಲದ ಸ್ಟಾರ್ಟ್​-ಅಪ್​ ಕಂಪನಿಯಾದ Apastron Pvt Ltdಗೆ ಹೇಳಿತ್ತು. ಇದೀಗ ಕಂಪನಿ ಭಾರತೀಯ ಸೇನೆಗೆ ಹೊಸ ಹೊಸ ಆಯುಧಗಳನ್ನ ರೆಡಿ ಮಾಡಿದೆ. ಇದರಲ್ಲಿ ತ್ರಿಶೂಲ ಇದೆ, ವಜ್ರಾ ಅನ್ನೋ ಆಯುಧ ಇದೆ. ರಾಡ್​​ಗೆ ಸ್ಪೈಕ್ಸ್ ಇರೋ ಆಯುಧ ಇದು. Sapper Punch ಅನ್ನೋ ಗ್ಲೌಸ್ ಇದೆ. ಇವೆಲ್ಲದರಲ್ಲೂ ಟೇಸರ್ ವ್ಯವಸ್ಥೆ ಇದೆ. ಟೇಸರ್ ಅಂದ್ರೆ ಶಾಕ್​ ಕೊಡೋ ಒಂದು ಆಯುಧ.

-masthmagaa.com

Contact Us for Advertisement

Leave a Reply