ಬಿಡುಗಡೆ ಆಯ್ತು ಗಾಳಿಪಟ 2 ಟ್ರೈಲರ್: ಸಂಬಂಧಗಳ ಅರ್ಥ ತಿಳಿಸುವ ಭಾವಯಾನ!

masthmagaa.com:

ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಂದಲೇ ನಿರೀಕ್ಷೆಯನ್ನ ಹುಟ್ಟಿಸಿರುವ ಚಿತ್ರ ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್‌ ಕಾಂಬಿನೇಶನ್‌ನಲ್ಲಿ ಬರ್ತೀರೋ ಬಹು ನಿರೀಕ್ಷಿತ ಚಿತ್ರ ಕೂಡ ಹೌದು. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲೇ ಬಿಡುಗಡೆ ಆಗಿದ್ದ ಗಾಳಿಪಟ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಇದೇ ಜೋಡಿ ಮತ್ತೊಮ್ಮೆ ಜೊತೆಯಾಗಿ ಗಾಳಿಪಟ 2 ಮೂಲಕ ಪ್ರೇಕ್ಷಕರನ್ನ ನಕ್ಕು ನಲಿಸೋಕ ರೆಡಿ ಆಗಿದ್ದಾರೆ. ಗಾಳಿಪಟ 2 ಸಿನಿಮಾದ ಟ್ರೈಲರ್ ಈಗ ಬಿಡುಗಡೆ ಆಗಿದೆ.

ನೀರುಕೋಟೆ ಎನ್ನುವ ಊರಿನಲ್ಲಿ ನಡೆಯುವ ಕಥೆಯ ಬಗ್ಗೆ ಟ್ರೈಲರ್ ನಲ್ಲಿ  ಯೋಗರಾಜ್​ ಭಟ್ಟರು ತಮ್ಮ ಧ್ವನಿಯಲ್ಲೇ ವಿವರಿಸಿದ್ದಾರೆ. ಶಿಕ್ಷಕನ ಪಾತ್ರದಲ್ಲಿ ಅನಂತ್​ ನಾಗ್, ಭೈರೇಗೌಡರ ಮಗ ಗಣೇಶ್, ಮುಗಿಲ್ ಪೇಟೆ ದಿಗಂತ, ವಿಧೇಯ ವಿದ್ಯಾರ್ಥಿ ಭೂಷಣ್ ಆಗಿ ಪವನ್ ಕುಮಾರ್ ಹೀಗೆ ಮೂರು ವಿಚಿತ್ರ ಕ್ಯಾರೆಕ್ಟರ್ಗಳ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಅನ್ನೋದರ ಝಲಕ್​ ಅನ್ನ  ಟ್ರೈಲರ್​ನಲ್ಲಿ ನೋಡಬಹುದು.
ಈ ಮೂರು ತರಲೆಗಳಿಗೆ ಮೂರು ಹುಡುಗೀರು ಕೂಡ ಇದ್ದಾರೆ. ಟ್ರೈಲರ್ ನಲ್ಲಿ ಗಾಳಿಪಟ ಭಾಗ ಒಂದರ ಛಾಯೆ ಹಾಸು ಹೊಕ್ಕಾಗಿದೆ. ಬಹುತೇಕ ಮೊದಲ್ನೆ ಭಾಗದಲ್ಲಿ ಇದ್ದ ನಟರೇ ಇದರಲ್ಲೂ ಇರೋದು ಅದಕ್ಕೆ ಒಂದು ಕಾರಣ ಇರಬಹದು.  ಒಟ್ನಲ್ಲಿ ಭಟ್ರು ಗಾಳಿಪಟ ಭಾಗ 1 ರಲ್ಲಿ ಕ್ರಿಯೇಟ್ ಮಾಡಿದ ಮ್ಯಾಜಿಕ್ ಅನ್ನೇ ಮತ್ತೊಮ್ಮೆ ಒಂದು ಫ್ರೆಶ್ ಕಥೆಯ ಮೂಲಕ ಈ ಸಿನಿಮಾದಲ್ಲೂ ರೀ ಕ್ರಿಯೇಟ್ ಮಾಡಿರುತ್ತಾರೆ ಅನ್ನುವ ಎಕ್ಸ್ಪೆಕ್ಟೇಷನ್ ಅಂತೂ ಈ ಟ್ರೈಲರ್ ಹುಟ್ಟುಹಾಕಿದೆ.
 
ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಮಲಯಾಳಂ ಮೂಲದ ನಟಿ ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.  ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇರುವ ಈ ಚಿತ್ರಕ್ಕೆ  ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇದೆ. ಸಿನಿಮಾ ಇದೆ ಆಗಸ್ಟ್ 12 ಕ್ಕೆ ಬಿಡುಗಡೆ ಆಗ್ತಾ ಇದೆ.
ಟ್ರೈಲರ್ ನೋಡೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
-masthmagaa.com

Contact Us for Advertisement

Leave a Reply