ಅನ್ನ ಹಾಕಿದವರನ್ನು ಕೊಂದು, ಓಡಲು ಯತ್ನಿಸಿ ಸತ್ತೇ ಹೋದ..!

65 ವರ್ಷದ ವೃದ್ಧ ಕಲಾವಿದೆಯನ್ನು 68 ವರ್ಷದ ಮಾಲಿಯೊಬ್ಬ ಕೊಲೆಗೈದಿದ್ದಾನೆ. ಗೋವಾದ ಅರ್ಪೋರಾದಲ್ಲಿ ಈ ಘಟನೆ ನಡೆದಿದೆ. ಶಿರೀನ್ ಮೋಡಿ ಮೃತ ಕಲಾವಿದೆ. ಇನ್ನು ಕೊಲೆಗೈದ ಮಾಲಿ ಪ್ರಫುಲ್ ಜಾನಾ ಕೂಡ ಸಾವನ್ನಪ್ಪಿದ್ದಾನೆ. ಶಿರೀನ್ ಅವರನ್ನು ಕೊಲೆಗೈದ ಬಳಿಕ ಪ್ರಫುಲ್ ಓಡಿ ಹೋಗಲು ಯತ್ನಿಸಿದ್ದಾನೆ. ಆದ್ರೆ ಓಡಿ ಹೋಗುವ ಭರದಲ್ಲಿ ಗಾರ್ಡನ್ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಪೊಲೀಸರು ಬಂದು ಆಸ್ಪತ್ರೆಗೆ ಸೇರಿದರಾದ್ರೂ ಅಷ್ಟರಲ್ಲಿ ಮಾಲಿ ಜೀವ ಬಿಟ್ಟಿದ್ದ.

ಮಾಲಿ ಮತ್ತು ಕಲಾವಿದೆ ಅರ್ಪೋರಾ ನಡುವೆ ಜಗಳ ನಡೆದಿದೆ. ಈ ವೇಳೆ ಶಿರೀನ್ ಮೋಡಿಗೆ ಮಾಲಿ ಹೊಡೆದಿದ್ದಾನೆ ಎಂದು ಸ್ಥಳೀಯರು ಕೂಡ ಆರೋಪಿಸಿದ್ದಾರೆ. ಇನ್ನು ಸಿಸಿಟಿವಿ ಪರಿಶೀಲಿಸಿದಾಗ ಮಾಲಿ ಓಡಿಹೋಗಲು ಯತ್ನಿಸಿದ್ದು ಗೊತ್ತಾಗಿದೆ.

Contact Us for Advertisement

Leave a Reply