ಅಮೆರಿಕ ಪೈಪ್​​ಲೈನ್ ಬಿಕ್ಕಟ್ಟು! ಇಂಧನ ಅಭಾವ, ಹೆಚ್ಚಿದ ದರ

masthmagaa.com:

ಅಮೆರಿಕದ ಅತಿದೊಡ್ಡ ಪೆಟ್ರೋಲಿಯನ್ ಪೈಪ್​​ಲೈನ್​ ಮೇಲೆ ಸೈಬರ್ ದಾಳಿಯಾಗಿರೋದ್ರಿಂದ ಫ್ಲೋರಿಡಾದಿಂದ ವರ್ಜೀನಿಯಾವರೆಗೆ ಗ್ಯಾಸ್​ ಸ್ಟೇಷನ್​​​ಗಳು ಖಾಲಿಯಾಗಿದ್ದು, ಪೆಟ್ರೋಲ್ ಬಂಕ್​​ಗಳಲ್ಲಿ ದರ ಏರಿಕೆಯಾಗಿದೆ. ಸೈಬರ್ ದಾಳಿಯ ಬೆನ್ನಲ್ಲೇ ಕೊಲೊನಿಯಲ್ ಪೈಪ್​​ ಲೈನ್ ಮೂಲಕ ಇಂಧನ ಪೂರೈಕೆ ಬಂದ್ ಆಗಿದ್ದು, ರಸ್ತೆ ಮಾರ್ಗವಾಗಿಯೇ ಸಾಗಿಸಲಾಗ್ತಿದೆ. ಹೀಗಾಗಿ ಭಾಗಗಳಿಗೆ ಇಂಧನ ಸಾಗಾಣಿಕೆ ತುಂಬಾ ತಡವಾಗ್ತಿದೆ. ಇದ್ರಿಂದ ಅಭಾವ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬೈಡೆನ್ ಸರ್ಕಾರ, ಸದ್ಯದಲ್ಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ. ಹೀಗಾಗಿ ಯಾರೂ ಇಂಧನವನ್ನು ಸಂಗ್ರಹಿಸಿಡೋಕೆ ಹೋಗ್ಬೇಡಿ ಅಂತ ಜನರಲ್ಲಿ ಮನವಿ ಮಾಡಿದೆ. ಕಳೆದ ಶುಕ್ರವಾರ ಈ ಪೈಪ್​ಲೈನ್​​ ಮೇಲೆ ಸೈಬರ್ ದಾಳಿ ನಡೆಸಿ, 100 ಜಿಬಿ ಡೇಟಾ ವಶಕ್ಕೆ ಪಡೆದಿರೋ ಹ್ಯಾಕರ್​​ಗಳು, ಕಂಪ್ಯೂಟರ್, ಸರ್ವಲ್ ಲಾಕ್ ಮಾಡಿದ್ದಾರೆ. ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದಾರೆ. ನಿನ್ನೆಯಷ್ಟೇ ಬೈಡೆನ್, ರಷ್ಯಾದಿಂದಲೇ ಈ ದಾಳಿ ನಡೆದಿದ್ದು, ರಷ್ಯಾ ಸರ್ಕಾರವೇ ನಡೆಸಿದೆ ಅನ್ನೋದಕ್ಕೆ ಸಾಕ್ಷ್ಯಗಳಿಲ್ಲ ಅಂತ ಹೇಳಿತ್ತು. ಅಂದಹಾಗೆ ಈ ಪೈಪ್​ಲೈನ್ 8,850 ಕಿಲೋಮೀಟರ್​ಗಳಷ್ಟು ಉದ್ದವಾಗಿದ್ದು, ಟೆಕ್ಸಾಸ್ ಮತ್ತು ನ್ಯೂಯಾರ್ಕ್ ನಗರದ ನಡುವೆ ಇಂಧನ ಪೂರೈಸೋ ಕೆಲಸ ಮಾಡುತ್ತೆ. ಎಷ್ಟರ ಮಟ್ಟಿಗೆ ಅಂದ್ರೆ ಅಮೆರಿಕದ ಪೂರ್ವ ತೀರಕ್ಕೆ ಬೇಕಾದ ಅರ್ಧದಷ್ಟು ಇಂಧನವನ್ನು ಇದರ ಮೂಲಕವೇ ಪೂರೈಸಲಾಗುತ್ತೆ. 1961ರಲ್ಲಿ ಈ ಪೈಪ್​​ಲೈನ್ ನಿರ್ಮಾಣ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply