ಯುಕ್ರೇನ್‌ಗೆ ಪೋಲೆಂಡ್‌ ಯುದ್ದ ಟ್ಯಾಂಕ್‌ಗಳನ್ನ ಪೂರೈಸಬಹುದು: ಜರ್ಮನಿ

masthmagaa.com:

ರಷ್ಯಾವನ್ನ ಎದುರಿಸೋಕೆ ಹೆವಿಟ್ಯಾಂಕ್‌ಗಳನ್ನ ನೀಡಿ ಅಂತ ಯುಕ್ರೇನ್‌ ತನ್ನ ಮಿತ್ರ ರಾಷ್ಟ್ರಗಳಿಗೆ ಬೇಡ್ತಾ ಬಂದಿದೆ. ಆದ್ರೆ ರಷ್ಯಾದ ಬೆದರಿಕೆಯಿಂದ ಯುಕ್ರೇನ್‌ ಈ ಬೇಡಿಕೆಯನ್ನ ಪೂರೈಸೋಕೆ ಪಾಶ್ಚಿಮಾತ್ಯ ದೇಶಗಳು ಹಿಂದೇಟು ಹಾಕ್ತಿವೆ. ಅದ್ರಲ್ಲೂ ಜರ್ಮನಿ ತನ್ನ ಹೆವಿ ಟ್ಯಾಂಕ್‌ ʻಲೆಪರ್ಡ್‌ 2ʼ ಟ್ಯಾಂಕ್‌ಗಳನ್ನ ಕಳಿಸೋಕೆ ಇನ್ನು ನಿರ್ಧಾರ ಮಾಡಿಲ್ಲ. ಆದ್ರೆ ಪೋಲೆಂಡ್‌ ಏನಾದ್ರೂ ಯುಕ್ರೇನ್‌ಗೆ ʻಲೆಪರ್ಡ್‌ 2ʼ ಯುದ್ದ ಟ್ಯಾಂಕ್‌ಗಳನ್ನ ಪೂರೈಸುತ್ತೆ ಅಂದ್ರೆ, ಅದಕ್ಕೆ ನಾವು ಅಡ್ಡಿ ಬರಲ್ಲ ಅಂತ ಜರ್ಮನಿಯ ವಿದೇಶಾಂಗ ಸಚಿವೆ ಹೇಳಿದ್ದಾರೆ. ಇನ್ನೊಂದ್‌ ಕಡೆ ಯುದ್ದ ನಡಿತಿರೋ ಹೊತ್ತಲ್ಲೇ ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಯುಕ್ರೇನ್‌ಗೆ ಭೇಟಿ ನೀಡಿದ್ದಾರೆ. ಯುಕ್ರೇನ್ ಅಧ್ಯಕ್ಷ ವೊಲೊಡಿಮರ್‌ ಝಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಬಂದಿರೋದಾಗಿ ಜಾನ್ಸನ್ ಹೇಳಿದ್ದಾರೆ. ಹಾಗೂ ಯುಕ್ರೇನ್ ಯುದ್ದವನ್ನ ಅಂತ್ಯಗೊಳಿಸೋಕೆ ಒಂದೇ ದಾರಿಯಿದೆ, ಅದು ಯುದ್ದದಲ್ಲಿ ಯುಕ್ರೇನ್ ಗೆಲ್ಲೋದು. ಅದ್ರಲ್ಲೂ ಎಷ್ಟು ಸಾಧ್ಯನೋ ಅಷ್ಟು ಬೇಗ ಯುದ್ದ ಗೆಲ್ಲೋದು. ಎಷ್ಟು ಬೇಗ ರಷ್ಯಾ ಅಧ್ಯಕ್ಷ ಪುಟಿನ್ ಸೋಲ್ತಾರೋ, ಅಷ್ಟು ಬೇಗ ಜಗತ್ತಿಗೆ ಹಾಗೂ ಯುಕ್ರೇನ್‌ಗೆ ಒಳ್ಳೆದಾಗುತ್ತೆ ಅಂತ ಜಾನ್ಸನ್‌ ಹೇಳಿದ್ದಾರೆ. ಇತ್ತ ಪುಟಿನ್‌ರನ್ನ ಸೋಲಿಸುವ ಬಗ್ಗೆ ಮಾತಾಡ್ತಾ ಇದ್ರೆ, ಅತ್ತ ರಷ್ಯಾ ಸೇನೆ ಯುಕ್ರೇನ್‌ನ ಝಪೋರಿಜಜೀಯಾ ಪ್ರದೇಶದಲ್ಲಿ ಮುನ್ನಡೆ ಸಾಧಿಸುತ್ತಿದೆ ಅಂತ ವರದಿಯಾಗಿದೆ. ಆರಿಕೀವ್‌ ಹಾಗೂ Hulyaipole ನಗರದಲ್ಲಿ ರಷ್ಯಾ ಸೇನೆ ತೀವ್ರ ದಾಳಿ ನಡೆಸಿ ಮುಂದೆ ಸಾಗ್ತಿದೆ ಅಂತ ರಷ್ಯಾದ ಅಧಿಕಾರಿ ವ್ಲಾಡಿಮಿರ್‌ ರೋಗೊವ್‌ ಹೇಳಿದ್ದಾರೆ. ಇದೇ ವೇಳೆ ಝಪೋರಿಜಜೀಯಾದ 15 ಕ್ಕಿಂತ ಹೆಚ್ಚು ಸ್ಥಳಗಳು ದಾಳಿಯಿಂದ ಅಫೆಕ್ಟ್‌ ಆಗಿವೆ ಅಂತ ಯುಕ್ರೇನ್‌ ಸೇನೆ ತಿಳಿಸಿದೆ.

-masthmagaa.com

Contact Us for Advertisement

Leave a Reply