ಬೆಂಕಿ ಹಚ್ಚಿಕೊಂಡು 3 ಗಂಟೆ ನರಳಿದಳು..! ನೋಡುತ್ತಾ ನಿಂತ ಪೊಲೀಸರು..!

ಮಧ್ಯಪ್ರದೇಶದ ಮಂದಸೋರ್ ಜಿಲ್ಲೆಯಲ್ಲಿ ಮನುಷ್ಯ ಕುಲವೇ ತಲೆತಗ್ಗಿಸೋ ಘಟನೆ ನಡೆದಿದೆ. 22 ವರ್ಷದ ಯುವತಿಯೊಬ್ಬಳು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪೊಲೀಸರು ಬಂದರೂ ಯುವತಿಯ ರಕ್ಷಣೆಗೆ ಮುಂದಾಗಲಿಲ್ಲ. ಸುಮಾರು 3 ಗಂಟೆಗಳ ಕಾಲ ಯುವತಿ ಬೆಂಕಿಯಲ್ಲಿ ಒದ್ದಾಡಿದ್ದಾಳೆ. ಅಲ್ಲದೆ ಕುಟುಂಬಸ್ಥರು ಮತ್ತು ಸ್ಥಳೀಯರಿಗೂ ಕೋಣೆಯೊಳಗೆ ಹೋಗಲು ಅವಕಾಶ ನೀಡಲಿಲ್ಲ. ತಡವಾಗಿ ಆಗಮಿಸಿದ ಎಸ್‍ಎಫ್‍ಎಲ್ ತಂಡ ಮತ್ತು ಮಹಿಳಾ ಪೊಲೀಸ್ ಬೆಂಕಿಯನ್ನು ನಂದಿಸಿದ್ರು. ಆದ್ರೆ ಅಷ್ಟರಲ್ಲಿ ಯುವತಿ ಜೀವ ಬಿಟ್ಟಿದ್ದಳು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯ್ತು.

ಯುವತಿ ಬೆಂಕಿ ಹಚ್ಚಿಕೊಂಡು ಚೀರಾಡುತ್ತಿದ್ದರೆ ಪೊಲೀಸರು ನೋಡುತ್ತಾ ನಿಂತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರಿಯಾದ ಸಮಯಕ್ಕೆ ಬಂದಿದ್ದ ಪೊಲೀಸರು ಯುವತಿಯನ್ನು ಕೂಡಲೇ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದರೆ ಉಳಿಯುತ್ತಿದ್ದಳು. ಆದ್ರೆ ಇದು ಪೊಲೀಸರ ಬೇಜವಾಬ್ದಾರಿಯನ್ನು ತೋರಿಸುತ್ತೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

Contact Us for Advertisement

Leave a Reply