ಮಧ್ಯಾಹ್ನದ ಬಿಸಿಯೂಟ ಬೇಯುತ್ತಿದ್ದ ಪಾತ್ರೆಗೆ ಬಿದ್ದು 3 ವರ್ಷದ ಮಗು ಸಾವು – ಅಯ್ಯೋ ವಿಧಿಯೇ..!

ಉತ್ತರ ಪ್ರದೇಶ: 3 ವರ್ಷದ ಹೆಣ್ಣುಮಗುವೊಂದು ಮಧ್ಯಾಹ್ನದ ಬಿಸಿಯೂಟ ಬೇಯುತ್ತಿದ್ದ ಪಾತ್ರೆಗೆ ಬಿದ್ದು ಬೆಂದು ಸತ್ತ ದಾರುಣ ಘಟನೆ ಉತ್ತರಪ್ರದೇಶದ ಮಿರ್ಜಾಪುರದ ಜಿಲ್ಲೆಯ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿದ್ದ ಕಟ್ಟಡದ ಸಾಮಾಗ್ರಿಗೆ ಎಡವಿ ಮಗು ಅಲ್ಲೆ ಬಿಸಿಯೂಟ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದಿದೆ. ಅಡುಗೆ ಮಾಡ್ತಿದ್ದವರು ಕಿವಿಗೆ ಇಯರ್ ಫೋನ್ ಹಾಕಿಕೊಂಡು ಅಡುಗೆ ಮಾಡ್ತಿದ್ದರಿಂದ ಮಗು ಬಿದ್ದಿದ್ದನ್ನು ಗಮನಿಸಲೇ ಇಲ್ಲ. ಹೀಗಾಗಿ ಮಗು ಆ ಪಾತ್ರೆಯಲ್ಲೇ ಬೆಂದು ಮಗು ಸಾವನ್ನಪ್ಪಿದೆ. ಇದಕ್ಕೆ ಬಿಸಿಯೂಟ ತಯಾರಕರ ನಿರ್ಲಕ್ಷವೇ ಕಾರಣ ಅಂತ ಮಗುವಿನ ತಂದೆ ಆರೋಪಿಸಿದ್ದಾರೆ. ಸದ್ಯ ಮಿರ್ಜಾಪುರ ಡಿಸಿ ಶಾಲೆಯ ಹೆಡ್ ಮಾಸ್ಟರ್ ರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಮಗಳನ್ನು ಕಳೆದು ಕೊಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Contact Us for Advertisement

Leave a Reply