ಸರ್ಕಾರಿ ಸಂಸ್ಥೆಗಳಿಗೆ ಕರೆಂಟ್‌ ಶಾಕ್:‌ ಕೋಟಿ-ಕೋಟಿ ರೂ. ಬಿಲ್‌ ಬಾಕಿ!

masthmagaa.com:

ವಿದ್ಯುತ್​​ ಬಿಲ್ ಪಾವತಿಸದ ಸರ್ಕಾರಿ ಸಂಸ್ಥೆಗಳಿಗೆ ಬೆಸ್ಕಾಂ (BESCOM) ಕರೆಂಟ್ ಶಾಕ್ ಕೊಟ್ಟಿದೆ. ವಿದ್ಯುತ್‌ ಶುಲ್ಕ ಪಾವತಿಸದ ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ನಗರಸಭೆ, ಗ್ರಾಮ ಪಂವಾಯಿತಿ ಕಚೇರಿಗೂ ಬೆಸ್ಕಾಂ ನೋಟಿಸ್ ಜಾರಿ ಮಾಡಿದೆ. ಈ ಸರ್ಕಾರಿ ಸಂಸ್ಥೆಗಳು ವಿದ್ಯುತ್‌ ಶುಲ್ಕ ಪಾವತಿಸದೇ ಕೋಟಿ-ಕೋಟಿ ರೂಪಾಯಿ ಹಣ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಬೆಸ್ಕಾಂನ ಹೆಬ್ಬಾಳ, ಜಾಲಹಳ್ಳಿ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್​ಗಳು ಪ್ರತಿ ಸರ್ಕಾರಿ ಇಲಾಖೆಗೂ ಪ್ರತ್ಯೇಕ ನೋಟಿಸ್‌ ಜಾರಿ ಮಾಡಲಾಗಿದೆ ಅಂತ ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. ಡಬ್ಲ್ಯುಎಸ್‌ಎಸ್‌ಬಿ ಬರೋಬ್ಬರಿ 65.9 ಕೋಟಿ ರೂ. ಬಿಲ್​​ ಪಾವತಿಸದೇ ಬಾಕಿ ಉಳಿಸಿಕೊಂಡಿದ್ರೆ, ಬಿಬಿಎಂಪಿ ನೀರು ಸರಬರಾಜು ವಿಭಾಗ 54.53 ಕೋಟಿ ರೂ. ಬಿಲ್​ ಬಾಕಿ ಉಳಿಸಿಕೊಂಡಿದೆ. ಈ ಸಂಬಂಧ ಬೆಸ್ಕಾಂ ಬಾಕಿ ಹಣ ಪಾವತಿಗೆ 7 ದಿನಗಳ ಗಡುವು ನೀಡಿದೆ. ಟೈಮ್‌ ಒಳಗೆ ಪಾವತಿ ಮಾಡದಿದ್ದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

-masthmagaa.com

Contact Us for Advertisement

Leave a Reply