ಗೋವಾದಲ್ಲಿ ನ್ಯೂಡ್ ಪಾರ್ಟಿ..! ಫೋಟೋ ವೈರಲ್

ಗೋವಾದಲ್ಲಿ ನಡೆದ ನ್ಯೂಡ್ ಪಾರ್ಟಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಫೋಟೊ ಹಾಕಿ, ಉತ್ತರ ಗೋವಾದಲ್ಲಿ ನಡೆದ ನ್ಯೂಡ್ ಪಾರ್ಟಿಯ ಬಗ್ಗೆ ಹೇಳಲಾಗಿದೆ. ಇದು ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಗೋವಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಈ ಫೋಟೋ ತೆಗೆದಿರೋದು ಎಲ್ಲಿ ಎಂದು ಹುಡುಕಾಟ ಆರಂಭಿಸಿದ್ದಾರೆ. ಈ ಪಾರ್ಟಿಯಲ್ಲಿ ಇನ್ನೂ 15 ಮಂದಿ ವಿದೇಶಿ ಮತ್ತು 10 ಮಂದಿ ಸ್ವದೇಶಿ ಯುವತಿಯರು ಭಾಗಿಯಾಗಲಿದ್ದಾರೆ ಅಂತ ಪೋಸ್ಟರ್‍ನಲ್ಲಿ ಬರೆಯಲಾಗಿದೆ. ಆದ್ರೆ ಪೊಲೀಸರು ನಾವು ಹೀಗಾಗಲು ಬಿಡೋದಿಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಪ್ರತಿಮಾ, ಸಿಎಂ ಪ್ರಮೋದ್ ಸಾವಂತ್ ಮತ್ತು ಪ್ರವಾಸೋದ್ಯಕ ಸಚಿವ ಅಜಗಾಂವ್ಕರ್ ವಿರುದ್ದ ವಾಗ್ದಾಳಿ ನಡೆಸಿದ್ದು, ಇಂತಹ ಕೃತ್ಯಗಳಿಗೆ ಅವಕಾಶ ನೀಡಬೇಡಿ ಎಂದಿದ್ದಾರೆ.

Contact Us for Advertisement

Leave a Reply