masthmmagaa.com:

ನಿನ್ನೆಯಷ್ಟೇ ಕುಸಿತ ಕಂಡಿದ್ದ ಷೇರುಪೇಟೆ ಇಂದು ತುಸು ಏರಿಕೆ ಕಂಡಿದೆ. ಇವತ್ತು ಸಂವೇದಿ ಸೂಚ್ಯಂಕ 432 ಅಂಕ ಏರಿಕೆ ಕಂಡು 44,260ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 129 ಅಂಕ ಏರಿಕೆ ಕಂಡು  12,987 ಆಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ 3 ಪೈಸೆ ಗಳಿಕೆ ಕಂಡು 73 ರೂಪಾಯಿ 88 ಪೈಸೆ ಆಗಿದೆ.

ಚಿನ್ನ-ಬೆಳ್ಳಿ ಬೆಲೆಯಲ್ಲಿ ಇವತ್ತು ಅಷ್ಟೇನು ಬದಲಾವಣೆ ಆಗಿಲ್ಲ. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಕೇವಲ 37 ರೂಪಾಯಿ ಜಾಸ್ತಿಯಾಗಿ 48,972 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 69 ರೂಪಾಯಿ ಜಾಸ್ತಿಯಾಗಿ 60,260 ರೂಪಾಯಿ ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthamagaa.com

Contact Us for Advertisement

Leave a Reply