masthmagaa.com:

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ಎರಡನೇ ದಿನ ಇಳಿಕೆ ಕಂಡಿದೆ. ಬುಧವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 520 ರೂಪಾಯಿ ಕಮ್ಮಿಯಾಗಿ 50,627 ಆಗಿದೆ. 22 ಕ್ಯಾರಟ್​​ನ 10 ಗ್ರಾಂ ಚಿನ್ನ 510 ರೂಪಾಯಿ ಕಮ್ಮಿಯಾಗಿ 48,910 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,458‬ ರೂಪಾಯಿ ಕಮ್ಮಿಯಾಗಿ 60,730 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಬುಧವಾರ 169 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 40,795ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 37 ಅಂಕ ಏರಿಕೆ ಕಂಡು 11,971 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 4 ಪೈಸೆ ಗಳಿಕೆ ಕಂಡು 73 ರೂಪಾಯಿ 31 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply