masthmagaa.com:

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬುಧವಾರ ಮತ್ತಷ್ಟು ಇಳಿಕೆ ಕಂಡಿದೆ.  24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 356 ರೂಪಾಯಿ ಇಳಿಕೆ ಕಂಡು 50,327 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 340 ರೂಪಾಯಿ ಕಡಿಮೆಯಾಗಿ 48,620 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,051 ರೂಪಾಯಿ ಕಡಿಮೆಯಾಗಿ 58,908 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಇನ್ನು ಷೇರುಪೇಟೆ ವಿಚಾರಕ್ಕೆ ಬಂದರೆ ಸತತ ಮೂರನೇ ದಿನ ಸಂವೇದಿ ಸೂಚ್ಯಂಕ ಕುಸಿತ ಕಂಡಿದೆ. ಇವತ್ತು 66 ಅಂಕ ಕುಸಿದ ಸಂವೇದಿ ಸೂಚ್ಯಂಕ 37,668 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 22 ಅಂಕ ಕುಸಿದು 11,132 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 1 ಪೈಸೆ ಗಳಿಕೆ ಕಂಡು 73 ರೂಪಾಯಿ 57 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply