masthmagaa.com:

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ನಾಲ್ಕನೇ ದಿನ ಇಳಿಕೆ ಕಂಡಿದೆ. ಗುರುವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 505 ರೂಪಾಯಿ ಇಳಿಕೆ ಕಂಡು 49,822 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 490 ರೂಪಾಯಿ ಕಡಿಮೆಯಾಗಿ 48,130 ಆಗಿದೆ. 1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 2,437 ರೂಪಾಯಿ ಕಡಿಮೆಯಾಗಿ 56,471 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಇನ್ನು ಷೇರುಪೇಟೆ ವಿಚಾರಕ್ಕೆ ಬಂದರೆ ಇವತ್ತು ಬರೋಬ್ಬರಿ 1,115 ಅಂಕಗಳ ಭಾರಿ ಕುಸಿತ ಕಂಡ ಸಂವೇದಿ ಸೂಚ್ಯಂಕ 36,554 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 326 ಅಂಕ ಕುಸಿದು 10,806 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ32 ಪೈಸೆ ಕುಸಿತ ಕಂಡು 73 ರೂಪಾಯಿ 89 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply