masthmagaa.com:

ಇವತ್ತು ಷೇರುಪೇಟೆ ಭಾರಿ ಏರಿಕೆ ಕಂಡಿದೆ. ಸಂವೇದಿ ಸೂಚ್ಯಂಕ 1,030 ಅಂಕ ಏರಿಕೆ ಕಂಡು 50,782ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 270 ಅಂಕ ಏರಿಕೆ ಕಂಡು 14,900 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 11 ಪೈಸೆ ಗಳಿಕೆ ಕಂಡು ₹ 72.35 (72 ರೂಪಾಯಿ 35 ಪೈಸೆ) ಆಗಿದೆ.

ಇನ್ನು ಚಿನ್ನ ಮತ್ತು ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 79 ರೂಪಾಯಿ ಕಮ್ಮಿಯಾಗಿ ₹46,838 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 504 ರೂಪಾಯಿ ಕಮ್ಮಿಯಾಗಿ ₹69,226 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್​ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply