RRRಗೆ ಒಲಿದು ಬಂದ ಹಾಲಿವುಡ್‌ನ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ!

masthmagaa.com:

ದೇಶ, ವಿದೇಶಗಳಲ್ಲಿ ದಾಖಲೆ ಬರೆದಿದ್ದ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ RRR ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಇದೀಗ ಸಿನಿಮಾದ ʻನಾಟು ನಾಟುʼ ಹಾಡಿಗೆ ಬೆಸ್ಟ್‌ ಓರಿಜನಲ್‌ ಸಾಂಗ್‌ ಕೆಟಗರಿಯಲ್ಲಿ ಹಾಲಿವುಡ್‌ನ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಲಭಿಸಿದೆ. ಅಮೆರಿಕದ ಬೆವರ್ಲಿ ಹಿಲ್ಸ್‌ನಲ್ಲಿ ನಡೆಯುತ್ತಿರೊ ಸಮಾರಂಭದಲ್ಲಿ ಈ ಗೌರವವನ್ನ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ರಾಜಮೌಳಿ, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಕುಟುಂಬ ಕೂಡ ಭಾಗಿಯಾಗಿತ್ತು. ಈ ಪ್ರಶಸ್ತಿಗಾಗಿ ಘಟಾನುಘಟಿ ಹಾಡುಗಳೇ ಕಣದಲ್ಲಿದ್ದವು. ಕೆರೊಲಿನ್, ಸಿಯೋ ಪಾ, ಹೋಲ್ಡ್ ಮೈ ಹ್ಯಾಂಡ್, ಲಿಫ್ಟ್ ಮಿ ಅಪ್ ರೀತಿಯ ಹಾಡುಗಳು ಈ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದವು. ಈ ಎಲ್ಲ ಹಾಡುಗಳ ಜನಪ್ರಿಯತೆಯನ್ನು ಹಿಂದಿಕ್ಕಿರೋ ನಾಟು ನಾಟು ಹಾಡು ಪ್ರಶಸ್ತಿ ಪಡೆದಿದೆ. ಜೊತೆಗೆ ಈ ಪ್ರಶಸ್ತಿ ಪಡೆದ ದಕ್ಷಿಣದ ಭಾರತದ ಮೊದಲ ಸಿನಿಮಾ ಅನ್ನೊ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಕ್ಕೆ ಪ್ರಧಾನಿ ಮೋದಿ ಸೇರಿದಂತೆ ಎಲ್ಲ ನಟ-ನಟಿಯರು, ಗಣ್ಯರು ಚಿತ್ರ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply