SCಯವನು ಅಂತ RSS ಕಚೇರಿ ಬಾಗಿಲಲ್ಲಿ ತಡೆದರು: ಬಿಜೆಪಿ ಎಕ್ಸ್‌ MLA

masthmagaa.com:

ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಅಂತ ತಮ್ಮನ್ನ RSS ಕಚೇರಿ ಒಳಗೆ ಹೋಗಲು ಬಿಡಲಿಲ್ಲ ಅಂತ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪಿಸಿದ್ರು. ಇದೀಗ ಈ ಆರೋಪಕ್ಕೆ RSS ರಿಪ್ಲೈ ನೀಡಿದೆ. ʻRSS ಪ್ರತಿಯೊಬ್ಬರನ್ನು ಸ್ವಾಗತಿಸುತ್ತೆ. ಇದು ಆಧಾರ ಇಲ್ಲದ ಅರೋಪʼ ಅಂತ ಸಂಘ ಪರಿವಾರದ ದಕ್ಷಿಣ-ಕೇಂದ್ರದ ಕಾರ್ಯನಿರ್ವಾಹಕ ಎನ್‌. ತಿಪ್ಪೇಸ್ವಾಮಿ ತಿರುಗೇಟು ನೀಡಿದ್ದಾರೆ. ಅಂದ್ಹಾಗೆ ಈ ಬಗ್ಗೆ ಶೇಖರ್‌ ಅವ್ರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ಗೆ ಆಡಿಯೋ ಮೆಸೇಜ್‌ ಒಂದನ್ನ ಕಳುಹಿಸಿದ್ರು. ಅದ್ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿರೋ ಹೆಡಗೇವಾರ್‌ ವಸ್ತುಸಂಗ್ರಹಾಲಯಕ್ಕೆ ನನಗೆ ಪ್ರವೇಶ ನೀಡಲಿಲ್ಲ. SC ಯವನು ಅಂತ ಹೀಗೆ ಮಾಡಿದ್ದಾರೆ. ಇದಕ್ಕೆ ಸ್ವಲ್ಪ ಸ್ಪಷ್ಟನೆ ಕೊಡಿ ಅಂತ ಶೇಖರ್‌ ಪ್ರಶ್ನಿಸಿದ್ರು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ, ಆರೋಪ ಸುಳ್ಳು ಅಂತ RSS ಹೇಳಿದೆ.

-masthmagaa.com

Contact Us for Advertisement

Leave a Reply