ಬಿಬಿಎಂಪಿಗೆ ಗೌತಮ್ ಕುಮಾರ್ ಜೈನ್ ಹೊಸ ಮೇಯರ್

ಬಿಬಿಎಂಪಿ ನೂತನ ಮೇಯರ್ ಆಗಿ ಬಿಜೆಪಿಯ ಎಂ.ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಬಿಜೆಪಿಯ ಗೌತಮ್ ಕುಮಾರ್ ಅವರ ಪರವಾಗಿ 129 ಮತಗಳು ಚಲಾವಣೆಯಾದ್ರೆ, ಕಾಂಗ್ರೆಸ್‍ನ ಸತ್ಯನಾರಾಯಣ ಪರ 112 ಮತಗಳು ಚಲಾವಣೆಯಾಗಿವೆ.

ಬಿಜೆಪಿಯಿಂದ ಜೋಗುಪಾಳ್ಯ ಕಾರ್ಪೊರೇಟರ್ ಗೌತಮ್ ಕುಮಾರ್ ಮತ್ತು ಸರ್ವಜ್ಞನಗರ ಕಾರ್ಪೊರೇಟರ್ ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದ್ರು. ಆದ್ರೆ ಕೊನೆ ಕ್ಷಣದಲ್ಲಿ ಪದ್ಮನಾಭ ರೆಡ್ಡಿ ನಾಮಪತ್ರ ವಾಪಸ್ ಪಡೆದ್ರು.

ಒಟ್ಟು 257 ಸದಸ್ಯರಲ್ಲಿ 249 ಸದಸ್ಯರು ಹಾಜರಾಗಿದ್ದರು. ಇನ್ನುಳಿದ 8 ಮಂದಿ ಸದಸ್ಯರು ಗೈರಾಗಿದ್ದರು.

ಚುನಾವಣೆ ಮುಂದೂಡಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಪೊರೇಟರ್ಸ್ ಪಟ್ಟು ಹಿಡಿದ್ರು. ಆದ್ರೆ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಇಂದು ಯಾವುದೇ ರೀತಿಯ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿ ಚುನಾವಣೆ ಪ್ರಕ್ರಿಯೆ ಆರಂಭಿಸಿದ್ರು.

ಜೆಡಿಎಸ್‍ನ ಇಬ್ಬರು ಸದಸ್ಯರಾದ ಮಂಜುಳಾ ನಾರಾಯಣ ಸ್ವಾಮಿ ಮತ್ತು ದೇವದಾಸ್ ಚುನಾವಣೆ ಬಹಿಷ್ಕರಿಸಿ ಹೊರನಡೆದರು.

Contact Us for Advertisement

Leave a Reply