ಸರ್ಕಾರಿ ಖಜಾನೆ ಅಂದ್ರೆ ಏನು..? ಎಲ್ಲಿ ಇರುತ್ತೆ..?

ಹಾಯ್ ಫ್ರೆಂಡ್ಸ್… ರಾಜ್ಯದಲ್ಲಿ ಈಗ ಸರ್ಕಾರದ ಖಜಾನೆ ಖಾಲಿಯಾಗಿದೆಯಾ ಭರ್ತಿಯಾಗಿದೆಯಾ ಅನ್ನೋದೆ ಚರ್ಚೆ. ಹಾಗಾದ್ರೆ

ಸರ್ಕಾರದ ಖಜಾನೆ ಅಂದ್ರೆ ಏನು.?
ಈಗಲೂ ಸರ್ಕಾರಗಳು ಈ ಥರ ಓಲ್ಡ್ ಸ್ಟೈಲ್ ನಲ್ಲಿ ಸಂಪತ್ತನ್ನು ಸಂಗ್ರಹಿಸಿ ಖಜಾನೆಯಲ್ಲಿ ಇಡುತ್ತವಾ? ಅಥವಾ ಬ್ಯಾಂಕ್ನಲ್ಲಿ ಇಡುತ್ತಾರೆ ಎಂದರೆ ಯಾವ ಬ್ಯಾಂಕಿನಲ್ಲಿ ಇಡುತ್ತಾರೆ..? ಈ ಇಂಟರೆಸ್ಟಿಂಗ್ ಮಾಹಿತಿಯನ್ನು ನಾವು ನಿಮಗೆ ತೋರಿಸುತ್ತಾ ಹೋಗ್ತೀವಿ..ಕೊನೆಯವರೆಗೂ ಓದಿ

ಮೊದಲಿಗೆ ಸರ್ಕಾರದ ದುಡ್ಡು ಅಂದ್ರೆ ಏನು?
ಸರ್ಕಾರದ ದುಡ್ಡು ಅಂದ್ರೆ ನಾವುನೀವೆಲ್ಲಾ ಸರ್ಕಾರಕ್ಕೆ ತೆರಿಗೆ ಮತ್ತು ಇತ್ಯಾದಿ ಶುಲ್ಕಗಳ ರೂಪದಲ್ಲಿ ಕೊಡುವ ದುಡ್ಡು. ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ 2 ಲಕ್ಷ ಕೋಟಿಗೂ ಅಧಿಕ. ಇದೆಲ್ಲ ಬೇರೆಬೇರೆ ತೆರಿಗೆಗಳ ರೂಪದಲ್ಲಿ ಜನರಿಂದ ರಾಜ್ಯ ಸಂಗ್ರಹಿಸುವ ದುಡ್ಡು.

ಈ ದುಡ್ಡು ಎಲ್ಲಿಗೆ ಹೋಗುತ್ತೆ? ಸರ್ಕಾರದ ಖಜಾನೆ ಅಂದ್ರೆ ಏನು?
ಸರ್ಕಾರದ ಖಜಾನೆ ಖಾಲಿಯಾಗಿದೆ ಅಂತಾರೆ ಯಡಿಯೂರಪ್ಪ . ಖಾಲಿಯಾಗಿಲ್ಲ, ನಾನ್ ಖಾಲಿ ಮಾಡಿಲ್ಲ, ನಾನು ಕುರ್ಚಿಯಿಂದ ಕೆಳಗಿಳಿಬೇಕಾದರೆ ತುಂಬಾ ದುಡ್ಡು ಇಟ್ಟೇ ಬಂದಿದ್ದೆ ಅಂತಾರೆ ಕುಮಾರಸ್ವಾಮಿ. ಇದನ್ನು ನೋಡಿ ಜನರಿಗೆ, ಯಪ್ಪಾ ಏನ್ ಗುರು ಇವರು ಅಂತಾ ಅನಿಸ್ತಾ ಇದೆ. ಜೊತೆಗೆ ಈ ಖಜಾನೆ ಅಂದ್ರೆ ಏನು ಅನ್ನೋ ಪ್ರಶ್ನೆ ಕೂಡ ಬರುತ್ತಾಯಿದೆ. ಫ್ರೆಂಡ್ಸ್ ಸರ್ಕಾರದ ಬೊಕ್ಕಸ ಅಥವಾ ಖಜಾನೆ ಅಂದ್ರೆ ಈತರ ದೊಡ್ಡ ರೂಮಲ್ಲಿ ಸಕಲ ಐಶ್ವರ್ಯಗಳನ್ನು ರಾಶಿ ಇಟ್ಟಿರಲ್ಲ. ಇವೆಲ್ಲ ರಾಜರ ಕಾಲದಲ್ಲಿದ್ದ ಖಜಾನೆಗಳು. ಈಗೇನಿದ್ದರೂ ನಮ್ಮ-ನಿಮ್ಮ ರೀತಿ ಬ್ಯಾಂಕನ್ನೇ ಯೂಸ್ ಮಾಡುತ್ತಾರೆ. ಎಲ್ಲಾ ದುಡ್ಡು ಸಂಗ್ರಹವಾಗಿದ್ದು ನೇರವಾಗಿ ಬ್ಯಾಂಕಿಗೆ ಹೋಗುತ್ತದೆ. ಸರ್ಕಾರ ಲೆಕ್ಕ ಇಟ್ಟುಕೊಂಡಿರುತ್ತದೆ. ನಮ್ಮ ಎಷ್ಟು ದುಡ್ಡು ಉಳಿದಿದೆ? ಎಷ್ಟು ಖರ್ಚಾಗುತ್ತದೆ ಅಂತ ಹಣಕಾಸು ಇಲಾಖೆ ಲೆಕ್ಕವನ್ನು ಇಟ್ಟಿರುತ್ತದೆ. ಯಾವ ಇಲಾಖೆ ಎಷ್ಟು ಖರ್ಚು ಮಾಡಬೇಕು ಅಂತ ಕೂಡ ಹಣಕಾಸು ಇಲಾಖೆ ಡಿಸೈಡ್ ಮಾಡುತ್ತದೆ. ಆದರೆ ದುಡ್ಡೆಲ್ಲ ಬ್ಯಾಂಕಿನಲ್ಲಿ ಇರುತ್ತದೆ.

ಸರ್ಕಾರದ ದುಡ್ಡು ಯಾವ ಬ್ಯಾಂಕಿನಲ್ಲಿ ಇರುತ್ತದೆ?
ನಮ್ಮ ನಿಮ್ಮತರ ಸಿಂಡಿಕೇಟು, ಎಸ್ಬಿಐ ಇನ್ನಿತರ ಪ್ರೈವೇಟ್ ಬ್ಯಾಂಕುಗಳಲ್ಲಿ ಸರ್ಕಾರ ದುಡ್ಡನ್ನು ಇಡಲ್ಲ. ಬದಲಾಗಿ ಸರ್ಕಾರದ ದುಡ್ಡು ನೇರವಾಗಿ ಆರ್ಬಿಐ ಗೆ ಹೋಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಸರ್ವೋಚ್ಛ ಬ್ಯಾಂಕ್. ಒಂದು ರೀತಿ ಎಲ್ಲ ಬ್ಯಾಂಕುಗಳ ಅಪ್ಪ ಇದ್ದಹಾಗೆ. ಕೇಂದ್ರ ಹಾಗೂ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳು ರಿಸರ್ವ್ ಬ್ಯಾಂಕ್ ನಲ್ಲಿ ತಮ್ಮ ಹಣವನ್ನು ಇಡುತ್ತವೆ. 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಪ್ರಕಾರ ಕೇಂದ್ರ ಸರ್ಕಾರವಂತೂ ಕಡ್ಡಾಯವಾಗಿ ತನ್ನೆಲ್ಲಾ ಹಣವನ್ನು ರಿಸರ್ವ್ ಬ್ಯಾಂಕ್ ಮೂಲಕವೇ ಬಳಸಬೇಕು. ಆದರೆ ರಾಜ್ಯಸರ್ಕಾರಗಳಿಗೆ ಇದೇನು ಕಡ್ಡಾಯವಲ್ಲ. ಆದರೂ ಸಿಕ್ಕಿಂ ಹೊರತುಪಡಿಸಿ ಉಳಿದ ಅಷ್ಟು ರಾಜ್ಯಗಳು ಆರ್ಬಿಐ ನಲ್ಲೆ ತಮ್ಮ ದುಡ್ಡನ್ನು ಇಡುತ್ತವೆ. ಅಲ್ಲಿಂದಲೇ ಖರ್ಚು ಮಾಡುತ್ತವೆ. ರಿಸರ್ವ್ ಬ್ಯಾಂಕ್ ಅಗತ್ಯಬಿದ್ದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಲವನ್ನೂ ಕೊಡುತ್ತದೆ. ಜೊತೆಗೆ ಎಲ್ಲ ರಾಜ್ಯ ಸರ್ಕಾರಗಳು ರಿಸರ್ವ್ ಬ್ಯಾಂಕ್ ನಲ್ಲಿ ಒಂದಿಷ್ಟು ಮಿನಿಮಮ್ ಬ್ಯಾಲೆನ್ಸ್ ನೀಡಲೇಬೇಕು ಎನ್ನುವ ನಿಯಮ ಇದೆ. ರಾಜ್ಯಗಳ ಆದಾಯ ಮತ್ತು ಸೈಜ್ ಗೆ ಅನುಗುಣವಾಗಿ ಅಮೌಂಟ್ ಚೇಂಜ್ ಆಗುತ್ತೆ. ಏನೋ ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮಾಮೂಲಿ ಬ್ಯಾಂಕುಗಳನ್ನು ಬಳಸಲು ಕೂಡ ಅವಕಾಶವಿದೆ. ಆದ್ರೆ ದೊಡ್ಡಮಟ್ಟದಲ್ಲಿ ರಿಸರ್ವ್ ಬ್ಯಾಂಕಿನಲ್ಲೇ ವ್ಯವಹಾರವನ್ನು ನಡೆಸುತ್ತವೆ.

Contact Us for Advertisement

Leave a Reply