1400 ಕಿ.ಮೀ. ಉದ್ದದ `ಹಸಿರು ಗೋಡೆ’ ನಿರ್ಮಿಸಲು ಕೇಂದ್ರದ ಪ್ಲಾನ್..!

ಪರಿಸರವನ್ನು ಉಳಿಸಿ, ಬೆಳೆಸಲು ಕೇಂದ್ರ ಸರ್ಕಾರ 1400 ಕೀಲೋಮೀಟರ್ ಉದ್ದದ ಗ್ರೀನ್ ವಾಲ್ ಅಂದ್ರೆ ಹಸಿರುಗೋಡೆ ನಿರ್ಮಿಸಲು ಮುಂದಾಗಿದೆ. ಆಫ್ರಿಕಾದ ಮಹಾದ್ವೀಪದಲ್ಲಿರುವ ಗ್ರೀನ್ ವಾಲ್ ರೀತಿಯಲ್ಲೇ ಈ ಹಸಿರುಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಭಾಗದಿಂದ ಬರುವ ಧೂಳು ಮಿಶ್ರದ ಗಾಳಿಯನ್ನು ತಡೆಯೋದು ಇದರ ಪ್ರಮುಖ ಉದ್ದೇಶವಾಗಿದೆ.

ಆಫ್ರಿಕಾದಲ್ಲಿ ಸೆನೆಗಲ್‍ನಿಂದ ಜಿಬೂತಿವರೆಗೆ ಹಸಿರುಗೋಡೆ ನಿರ್ಮಿಸಲಾಗಿದೆ. ಅದೇ ರೀತಿ ಗುಜರಾತ್‍ನ ಪೋರ್ ಬಂದರ್‍ನಿಂದ ಹರಿಯಾಣ ದೆಹಲಿ ಗಡಿಯವರೆಗೆ ಗ್ರೀನ್ ವಾಲ್ ಆಫ್ ಇಂಡಿಯಾ ನಿರ್ಮಿಸಲು ನಿರ್ಧರಿಸಲಾಗಿದೆ. ಸರ್ಕಾರ ಇನ್ನೂ ಈ ಯೋಜನೆಯ ಆರಂಭದ ಹಂತದಲ್ಲಿದ್ದು, ಹಲವು ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಉತ್ಸುಕರಾಗಿದ್ದಾರೆ. ಈ ಯೋಜನೆಯನ್ನು 2030ರೊಳಗೆ ಸಾಕಾರಗೊಳಿಸೋದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದರಿಂದ ಸುಮಾರು 60 ಲಕ್ಷ ಹೆಕ್ಟೇರ್ ಪ್ರದೇಶ ಮಾಲಿನ್ಯದಿಂದ ಮುಕ್ತವಾಗಲಿದೆ.

Contact Us for Advertisement

Leave a Reply