masthmagaa.com:

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಈರುಳ್ಳಿ ಸಂಗ್ರಹದ ಮೇಲೆ ಮಿತಿ ಹೇರಿದೆ. ಇದಕ್ಕಾಗಿ ಇತ್ತೀಚೆಗಷ್ಟೇ ತಿದ್ದುಪಡಿ ತಂದಿದ್ದ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಚಿಲ್ಲರೆ ಮಾರಾಟಗಾರರು ಗರಿಷ್ಟ 2 ಟನ್​ನಷ್ಟು ಮತ್ತು ಹೋಲ್​ಸೇಲ್ ಮಾರಾಟಗಾರರು 25 ಟನ್​ಗಳಷ್ಟು ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚು ಸಂಗ್ರಹಿಸಿದ್ರೆ ಅಪರಾಧವಾಗುತ್ತದೆ. ಈ ನಿಯಮ ಡಿಸೆಂಬರ್ 31ರವರೆಗೂ ಜಾರಿಯಲ್ಲಿರಲಿದೆ. ಅಂದ್ಹಾಗೆ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ (Essential Commodities Amendment Act) ಪ್ರಕಾರ ಅಸಾಧಾರಣ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಹಾಳಾಗುವ ಸರಕುಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

-masthmagaa.com

 

Contact Us for Advertisement

Leave a Reply