ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಎರಡನೇ ಅವಧಿಗೆ ಮರು ಆಯ್ಕೆ!

masthmagaa.com:

ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಎರಡನೇ ಅವಧಿಗೆ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಬಾರ್ಕ್ಲೇ ಮುಂದಿನ ಎರಡು ವರ್ಷಗಳ ಕಾಲ ಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಐಸಿಸಿ ಅಧ್ಯಕ್ಷ ಹುದ್ದೆಗಾಗಿ ಬಾರ್ಕ್ಲೇ ಜೊತೆಗೆ ಜಿಂಬಾಬ್ವೆಯ ತವೆಂಗ್ವಾ ಮುಕುಹಲಾನಿ ಕೂಡ ಸ್ಪರ್ಧಿಸಲಿದ್ದಾರೆ ಅನ್ನೊ ಮಾತು ಆರಂಭದಲ್ಲಿ ಕೇಳಿಬಂದಿತ್ತು. ಆದರೆ ತವೆಂಗ್ವಾ ಮುಕುಹಲಾನಿ ತಮ್ಮ ನಿರ್ಧಾರದಿಂದ ಹಿಂದೆ ಸರಿದ ಕಾರಣ ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 17 ಸದಸ್ಯರ ಮಂಡಳಿಯಲ್ಲಿ ಬಿಸಿಸಿಐ ಕೂಡ ಅವರಿಗೆ ಸಂಪೂರ್ಣ ಬೆಂಬಲವನ್ನ ನೀಡಿದೆ. ಅಂದ್ಹಾಗೆ ಮೊದಲ ಬಾರಿಗೆ ಬಾರ್ಕ್ಲೇ ನವೆಂಬರ್ 2020ರಲ್ಲಿ ಐಸಿಸಿ ಅಧ್ಯಕ್ಷ ಕುರ್ಚಿ ಏರಿದ್ದರು. ಇತ್ತ ಬಿಸಿಸಿಐನ ಕಾರ್ಯದರ್ಶಿಯಾಗಿರೊ ಜಯ್‌ ಶಾ ಅವ್ರನ್ನ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply