ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ.. 7 ಮಂದಿಗೆ ಗಾಯ..

ಜಮ್ಮು ಕಾಶ್ಮೀರದ ಹರಿಸಿಂಗ್ ಹೈ ಸ್ಟ್ರೀಟ್ ನಲ್ಲಿ ಭಯೋತ್ಪಾದಕರು ದುಷ್ಕøತ್ಯ ಎಸಗಿದ್ದಾರೆ. ಇಲ್ಲಿ ಉಗ್ರರು ಗ್ರನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ತಕ್ಷಣವೇ ಪ್ರದೇಶವನ್ನು ಸುತ್ತುವರಿದಿರುವ ಸೇನಾಪಡೆ ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದಕ್ಕೂ ಮುನ್ನ ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಬಳಿ ಉಗ್ರರು ಅಕ್ಟೋಬರ್ 5ರಂದು ಗ್ರನೇಡ್ ದಾಳಿ ನಡೆಸಿದ್ದರು. ಡಿಸಿ ಕಚೇರಿ ಬಳಿ ನಡೆಸಿದ್ದ ಈ ದಾಳಿಯಲ್ಲಿ ಓರ್ವ ಟ್ರಾಫಿಕ್ ಪೊಲೀಸ್, ಪತ್ರಕರ್ತ ಸೇರಿದಂತೆ 14 ಮಂದಿ ಗಾಯಗೊಂಡಿದ್ದರು.

ಕಳೆದ ಮಂಗಳವಾರ ಅವಂತೀಪುರದಲ್ಲಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಓರ್ವ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದರು. ಸಾವನ್ನಪ್ಪಿದ್ದ ಉಗ್ರ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದವನು ಎಂದು ತಿಳಿದುಬಂದಿತ್ತು.

Contact Us for Advertisement

Leave a Reply