ಸಿದ್ಧಗಂಗಾ ಶ್ರೀಗಳ ಫೋನ್ ಕೂಡ ಕದ್ದಾಲಿಕೆ: ಜಿ.ಎಸ್.ಬಸವರಾಜ್

ಲೋಕಸಭೆ ಚುನಾವಣೆ ಸಮಯದಲ್ಲಿ ನನ್ನ ಫೋನ್ ಕೂಡ ಟ್ಯಾಪ್ ಆಗಿದೆ ಅಂತ ಸಂಸದ ಜಿ.ಎಸ್.ಬಸವರಾಜ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಲ್ಲರ ಫೋನ್ ಟ್ಯಾಪ್ ಆಗಿದೆ. ನಾನು ದೇವೇಗೌಡರ ಎದುರಾಳಿಯಾಗಿದ್ದರಿಂದ ನನ್ನ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿದೆ. ನನ್ನದು ಮಾತ್ರವಲ್ಲ. ಎಲ್ಲಾ ಅಭ್ಯರ್ಥಿಗಳ ಫೋನ್ ಕದ್ದಾಲಿಕೆಯಾಗಿದೆ. ಸಿದ್ಧಗಂಗಾ ಶ್ರೀಗಳ ಫೋನ್ ಕೂಡ ಕದ್ದಾಲಿಕೆಯಾಗಿತ್ತು. ಇನ್ನು ನಮ್ಮ ಫೋನ್ ಬಿಡ್ತಾರಾ ಅಂತ ಪ್ರಶ್ನಿಸಿದ್ದಾರೆ.

ಕಳೆದ ವಾರವಷ್ಟೇ ನಿರ್ಮಲಾನಂದ ಶ್ರೀಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ ಅಂತ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀಗಳನ್ನು ನಾನು ತುಂಬಾ ನಂಬಿದ್ದೆ. ಹೀಗಿರುವಾಗ ಅವರ ಫೋನ್ ಕದ್ದಾಲಿಕೆ ಮಾಡಲು ಸಾಧ್ಯವೇ..? ಈ ಆರೋಪದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಅಂತ ಹೇಳಿದ್ದರು.

Contact Us for Advertisement

Leave a Reply