ಯಡಿಯೂರಪ್ಪ ಕಾಲ್ಗುಣದಿಂದ ಮಳೆ, ಬೆಳೆ: ಜಿಟಿಡಿ

ಸಿಎಂ ಯಡಿಯೂರಪ್ಪರನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತೊಮ್ಮೆ ಹಾಡಿ ಹೊಗಳಿದ್ದಾರೆ. ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆದ ಬಳಿಕ ಮಳೆ, ಬೆಳೆ ಚೆನ್ನಾಗಿ ಆಗಿದೆ ಅಂದ್ರು. ರಾಜ್ಯದಲ್ಲಿ ಮಳೆಯಾಗದೇ ಜನ ಪರದಾಡುತ್ತಿದ್ದರು. ನನ್ನ ಕ್ಷೇತ್ರದಲ್ಲೇ ಕುಡಿಯೋಕೆ, ಬೆಳೆ ಬೆಳೆಯೋಕೆ ನೀರೇ ಇರಲಿಲ್ಲ. ಟ್ಯಾಂಕರ್‍ನಲ್ಲಿ ನೀರು ಪೂರೈಸೋ ಪರಿಸ್ಥಿತಿ ಬಂದಿತ್ತು. ರಾಜ್ಯದ ವಿವಿಧೆಡೆ ಜನ ನೀರಿಗಾಗಿ ದೇವರ ಮೊರೆ ಹೋಗಿದ್ದರು. ಮಠ, ಮಂದಿರಗಳಲ್ಲಿ ಹೋಮ-ಹವನ ಮಾಡಲಾಯ್ತು. ಆದರೂ ರಾಜ್ಯದಲ್ಲಿ ಮಳೆಯಾಗಿರಲಿಲ್ಲ. ಯಾವಾಗ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ರೋ ಆಗ ಅವರ ಕಾಲ್ಗುಣದಿಂದ ರಾಜ್ಯದೆಲ್ಲೆಡೆ ಮಳೆ ಶುರುವಾಯ್ತು ಎಂದಿದ್ದಾರೆ. ಇನ್ನು ಹಲವೆಡೆ ಪ್ರವಾಹ ಆಗಿದ್ದು ಅವರಿಗೂ ಯಡಿಯೂರಪ್ಪ ಸೂಕ್ತ ಪರಿಹಾರ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಅಂತ ಹೇಳಿದ್ರು.

Contact Us for Advertisement

Leave a Reply