ಸಿಡ್ನಿಯಲ್ಲಿ ಗುಳಿಗ ದರ್ಶನ: ಪ್ರಧಾನಿ ಮೋದಿ ಎದುರೇ ಮೊಳಗಿದ ವರಾಹ ರೂಪಂ ಹಾಡು!

masthmagaa.com:

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮೋದಿ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಅನಿವಾಸಿ ಭಾರತೀಯರ ಬಗ್ಗೆ ಇಂದು (ಮೇ 23) ಭಾಷಣ ಮಾಡಿದ್ದಾರೆ.ಮೋದಿಯವರನ್ನ ಸ್ವಾಗತ ಮಾಡಲು ಹಲವು ಮನರಂಜನೆ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿತ್ತು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ಕುರಿತಾದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಪ್ರಸಿದ್ದಕನ್ನಡ ಚಿತ್ರ ಕಾಂತಾರದ ವರಾಹ ರೂಪಂ ಹಾಡಿಗೂ ಕೂಡ ನೃತ್ಯ ಮಾಡಿದ್ದಾರೆ.

ಕಾಂತಾರ ಸಿನಿಮಾದ ಗುಳಿಗ ವೇಷ ಹಾಕಿಕೊಂಡು ಯಕ್ಷಗಾನ ವೇಷಧಾರಿಗಳು ಹಾಗೂ ಕೆಲವು ಮಹಿಳೆಯರು ವರಾಹ ರೂಪಂ ಹಾಗೂ ವಾ ಪೊರ್ಲು ಯಾ ಹಾಡಿಗೆ ಜನಪದ ಹಾಗೂ ಭರತ ನಾಟ್ಯ ರೀತಿಯಲ್ಲಿ ನೃತ್ಯ ಮಾಡಿದ್ರು. ಭಾರತದ ಹಲವು ರಾಜ್ಯಗಳ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಆ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳನ್ನು ವೇದಿಕೆ ಮೇಲೆ ಮಾಡಿದ್ರು. ತೆಲುಗು ರಾಜ್ಯದ ಪರವಾಗಿ RRR ಸಿನಿಮಾದ ನಾಟು ನಾಟು ಹಾಡಿಗೂ ಕೂಡ ಹೆಜ್ಜೆ ಹಾಕಿದ್ರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ನಂತರ ಮಾತನಾಡಿದ ಮೋದಿ, ”ನಮ್ಮ ಜೀವನಶೈಲಿ ವಿಭಿನ್ನವಾಗಿರಬಹುದು ಆದರೆ ಈಗ ಯೋಗ ಕೂಡ ನಮ್ಮನ್ನು ಬೆಸೆದಿದೆ. ನಾವು ಕ್ರಿಕೆಟ್‌ ನಿಂದಾಗಿ ದೀರ್ಘಕಾಲ ಸಂಪರ್ಕ ಹೊಂದಿದ್ದೇವೆ. ಆದರೆ ಈಗ ಟೆನಿಸ್ ಮತ್ತು ಸಿನಿಮಾ ಕೂಡಾ ನಮ್ಮನ್ನು ಪರಸ್ಪರ ಬೆಸೆಯುವ ಕೊಂಡಿಗಳಾಗಿವೆ. ನಾವು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸುತ್ತೇವೆ, ಈಗ ಮಾಸ್ಟರ್​​ಶೆಫ್ ನಮ್ಮನ್ನು ಪರಸ್ಪರ ಬೆಸೆಯುತ್ತದೆ. ನಾನು 2014ರಲ್ಲಿ ಇಲ್ಲಿಗೆ ಬಂದಾಗ, ಭಾರತೀಯ ಪ್ರಧಾನಿಗಾಗಿ ನೀವು 28 ವರ್ಷಗಳವರೆಗೆ ಕಾಯಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಹಾಗಾಗಿ, ನಾನು ಮತ್ತೊಮ್ಮೆ ಸಿಡ್ನಿಯಲ್ಲಿದ್ದೇನೆ ಎಂದಿದ್ದಾರೆ. ಭಾರತ ಮೂಲದ ಸಮೀರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧ ಗಟ್ಟಿಯಾಗಿದೆ. 2 ದೇಶಗಳ ಸಂಬಂಧ ಗಟ್ಟಿಯಾಗಿರಲು ಭಾರತೀಯರು ಕಾರಣ. ಜೈಪುರದ ಜಿಲೇಬಿ, ಸ್ವೀಟ್​ಗಳು ಆಸ್ಟ್ರೇಲಿಯಾದಲ್ಲೂ ಸಿಗುತ್ತದೆ. ಇಂದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ, ಇಡೀ ಜಗತ್ತಿನಾದ್ಯಂತ ಭಾರತದ ಟ್ಯಾಲೆಂಟ್​ ಫ್ಯಾಕ್ಟರಿ ಇದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply