ವೈಯಕ್ತಿಕ ಟೀಕೆ ಬೇಡ: ಸಾರಾ ಮುಂದೆ ಹಳ್ಳಿಹಕ್ಕಿ ಶರಣಾಗತಿ..!?

ಮೈಸೂರು: ನಿನ್ನೆಯಷ್ಟೇ ಎಚ್.ವಿಶ್ವನಾಥ್ ಮತ್ತು ಸಾರಾ ಮಹೇಶ್ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಆದ್ರೆ ಇವತ್ತು ಫುಲ್ ಯೂಟರ್ನ್ ಹೊಡೆದಿರೋ ವಿಶ್ವನಾಥ್ ವೈಯಕ್ತಿಕ ಟೀಕೆ ಬೇಡ ಎಂದು ಶರಣಾಗಿದ್ದಾರೆ. ಮೈಸೂರಲ್ಲಿ ಮಾತನಾಡಿದ ಅವರು, ಇಬ್ಬರೂ ತಪ್ಪು ಮಾಡಿದ್ದೇವೆ. ವೈಯುಕ್ತಿಕ ಟೀಕೆಗಳನ್ನು ನಿಲ್ಲಿಸೋಣ ಎಂದಿದ್ದಾರೆ. ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ. ಜನರು ನಮ್ಮನ್ನು ನೋಡುತ್ತಿದ್ದಿದ್ದಾರೆ. ಅವರ ಮುಂದೆ ನಾವು ಜಾರಿ ಬೀಳುವುದು ಬೇಡ. ಇಬ್ಬರೂ ತಪ್ಪು ಮಾಡುತ್ತಿದ್ದೇವೆ ಅಂತ ನನಗೆ ಅನಿಸುತ್ತಿದೆ. ನಾವಿಬ್ಬರು ಒಂದೇ ಊರಿನವರು, ಪರಸ್ಪರ ಈ ರೀತಿ ಮಾತನಾಡುವುದು ಬೇಡ. ನೀವೇನೋ ಮಾಡುತ್ತೀರಾ ಅಂತ ಹೆದರಿಕೆಯಿಂದ ನಾನು ಈ ಮಾತುಗಳನ್ನ ಹೇಳುತ್ತಿಲ್ಲ. ನೀವು ಬೆಳೆಯಬೇಕಿರುವ ರಾಜಕಾರಣಿ. ನನ್ನದು ನಿವೃತ್ತಿಯ ರಾಜಕಾರಣ. ಆದ್ದರಿಂದ ಇಂತಹ ಪರಸ್ಪರ ವೈಯುಕ್ತಿಕ ಮಾತುಗಳು ನಮಗೆ ಒಳ್ಳೆಯದಲ್ಲ. ಇನ್ನಾದ್ರು ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಹಾಗೂ ವಿಷಯಾಧಾರಿತವಾಗಿ ಮಾತನಾಡೋಣ ಎಂದಿದ್ದಾರೆ. ಇಷ್ಟು ದಿನ ನೀವು ಹಾಗೆ ಮಾಡಿದ್ರಿ, ಹೀಗೆ ಮಾಡಿದ್ರಿ ಅಂತೆಲ್ಲಾ ಕಿತ್ತಾಡಿಕೊಂಡ ಬಳಿಕ ಈಗ ವಿಶ್ವನಾಥ್ ಶರಣಾಗತಿ ಕುತೂಹಲ ಮೂಡಿಸಿದೆ.

Contact Us for Advertisement

Leave a Reply