ಹೈಟಿಯಲ್ಲಿ ಸೇನಾ ಬಂಡಾಯದಿಂದ ಉದ್ವಿಗ್ನತೆ! ತುರ್ತು ಪರಿಸ್ಥಿತಿ ಘೋಷಣೆ!

masthmagaa.com:

ಹೈಟಿಯಲ್ಲಿ ಸೇನಾ ಬಂಡಾಯ ಅತಿರೇಕಕ್ಕೆ ತಲುಪಿದ್ದು ಇದೀಗ ಹೈಟಿಯಾದ್ಯಂತ 72 ಗಂಟೆಗಳ ತುರ್ತು ಪರಿಸ್ಥಿತಿ ಮತ್ತು ನೈಟ್‌ ಕರ್ಪ್ಯೂ ಘೋಷಿಸಲಾಗಿದೆ. ಹೈಟಿಯ ಹಂಗಾಮಿ ಪ್ರಧಾನಿ ಅಧಿಕಾರದಿಂದ ಕೆಳಗಿಳಿಬೇಕು ಅಂತ ಅಲ್ಲಿನ ಸೇನೆ ಬಂಡಾಯ ಎದ್ದಿತ್ತು. ಇದರ ಭಾಗವಾಗಿ ಮಾರ್ಚ್‌ 03 ರಂದು ಅಲ್ಲಿನ ಅತಿದೊಡ್ಡ ಜೈಲಿನ ಮೇಲೆ ದಾಳಿ ನಡೆಸಲಾಗಿತ್ತು. ಪರಿಣಾಮ 12 ಮಂದಿ ಪ್ರಾಣ ಕಳೆದುಕೊಂಡಿದ್ರು. ಹಾಗೂ 4,000 ಖೈದಿಗಳು ಈ ಜೈಲಿನಿಂದ ತಪ್ಪಿಸಿಕೊಂಡಿದ್ರು. ಹೀಗಾಗಿ ಹೈಟಿಯಲ್ಲಿ ಭಾರೀ ಕೋಲಾಹಲ ಉಂಟಾಗಿದ್ದು ಅಲ್ಲಿರೋ ಗ್ಯಾಂಗ್‌ಗಳು ಸರ್ಕಾರದ ವಿರುದ್ದ ತಿರುಗಿಬೀಳೋ ಅಪಾಯ ಇದೆ. ಒಂದು ಕಡೆ ಸೇನಾ ಬಂಡಾಯ ಇನ್ನೊಂದು ಕಡೆ ಗ್ಯಾಂಗ್‌ವಾರ್‌ ನಡೆಯೋ ಆತಂಕ ಇರೋದ್ರಿಂದ ಸರ್ಕಾರ ತುರ್ತು ಪರಿಸ್ಥಿತಿಯನ್ನ ಘೋಷಿಸಿ ನೈಟ್‌ ಕರ್ಫ್ಯೂ ಜಾರಿ ಮಾಡಿದೆ.

-masthmagaa.com

Contact Us for Advertisement

Leave a Reply