ಭಾರತ-ಬಾಂಗ್ಲಾ ನಡುವೆ ಐತಿಹಾಸಿಕ ರೈಲ್ವೆ ಸಂಚಾರ

masthmagaa.com:

ಭಾರತ ಮತ್ತು ಬಾಂಗ್ಲಾದೇಶದ ಹಲ್ದಿಬಾರಿ–ಚಿಲ್ಹಾಹಟಿ ನಡುವಿನ ಸರಕು ಸಾಗಣೆ ರೈಲ್ವೆ ಸಂಚಾರ ಇಂದಿನಿಂದ ಪ್ರಾರಂಭವಾಗಿದೆ. 1965ರಿಂದ ಈ ಸೇವೆಯು ಸ್ಥಗಿತವಾಗಿತ್ತು. ಆದ್ರೆ ಇತ್ತೀಚೆಗೆ ಮರು ಅಭಿವೃದ್ಧಿಪಡಿಸಲಾಗಿದ್ದ ರೈಲು ಮಾರ್ಗವನ್ನು ಕಳೆದ ವರ್ಷ ಡಿಸೆಂಬರ್ 17ರಂದು ಪ್ರಧಾನಿ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಿದ್ರು. ಅದರಂತೆ ಇಂದಿನಿಂದ ಸಂಚಾರ ಶುರುವಾಗಿದ್ದು, ಜಲ್ಲಿಕಲ್ಲು ಹೊತ್ತ ರೈಲು ಪಶ್ಚಿಮ ಬಂಗಾಳದ ಚಿಲಾಹಟಿಯಿಂದ ಬಾಂಗ್ಲಾದೇಶದ ನಿಲ್‌ಫಮಾರಿ ಜಿಲ್ಲೆಗೆ ತೆರಳಿದೆ.

-masthmagaa.com

Contact Us for Advertisement

Leave a Reply