masthmagaa.com:

ಕೊರೋನಾ ಲಸಿಕೆ ಬಗ್ಗೆ ನಾನಾ ಊಹಾಪೋಹಗಳು ಹರಿದಾಡ್ತಿದೆ. ಈ ವರ್ಷಾಂತ್ಯದಲ್ಲಿ ಲಸಿಕೆ ಸಿಗುತ್ತೆ ಅಂತ ಕೆಲವರು ಹೇಳ್ತಿದ್ರೆ, ಇನ್ನೂ ಕೆಲವರು ಮುಂದಿನ ವರ್ಷ ಆರಂಭದಲ್ಲಿ ಸಿಗುತ್ತೆ ಅಂತಿದ್ದಾರೆ, ಮತ್ತೆ ಕೆಲವರು ಮುಂದಿನ ವರ್ಷವೂ ಲಸಿಕೆ ಸಿಗುವುದು ಅನುಮಾನ ಅಂತ ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಕೊರೋನಾ ಲಸಿಕೆ ಬಗ್ಗೆ ಭಾರತೀಯರಲ್ಲಿದ್ದ ಅನುಮಾನಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘2021ರ ಆರಂಭದಲ್ಲಿ ಒಂದಕ್ಕಿಂತ ಹೆಚ್ಚು ಕೊರೋನಾ ಲಸಿಕೆ ಸಿಗುವ ನಿರೀಕ್ಷೆ ನಮಗಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆ ದೇಶದಲ್ಲಿ ಅದನ್ನು ಹೇಗೆ ಹಂಚಬೇಕು ಅಥವಾ ಪೂರೈಸಬೇಕು ಎಂಬ ಬಗ್ಗೆ ತಜ್ಞರ ತಂಡ ಪ್ಲಾನ್ ಮಾಡ್ತಿದೆ. ಯಾರಿಗೆ ಮೊದಲು ಲಸಿಕೆ ನೀಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ’ ಎಂದಿದ್ದಾರೆ.

ಹಿಂದೊಮ್ಮೆ ಮಾತನಾಡುವಾಗ ಡಾ. ಹರ್ಷವರ್ಧನ್, ಮುಂದಿನ ವರ್ಷಾರಂಭದಲ್ಲಿ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಅಂತ ಹೇಳಿದ್ದರು. ಆದ್ರೆ ಈ ಬಾರಿ ಮಾತನಾಡುವಾಗ ಒಂದಕ್ಕಿಂತ ಹೆಚ್ಚು ಲಸಿಕೆ ಸಿಗುವ ಸಾಧ್ಯತೆ ಇದೆ ಅಂತ ಹೇಳಿರೋದು ಗಮನಾರ್ಹ. ಅಂದ್ರೆ ಭಾರತದಲ್ಲಿ ಮಾನವ ಪ್ರಯೋಗ ನಡೆಯುತ್ತಿರುವ ಲಸಿಕೆಗಳ ಪೈಕಿ ಎರಡು ಅಥವಾ ಅದಕ್ಕಿಂತ ಹೆಚ್ಚು ಲಸಿಕೆಗಳು ಪರಿಣಾಮಕಾರಿಯಾಗಿದೆ ಅನ್ನೋದು ಕೇಂದ್ರ ಸಚಿವರ ಮಾತಿನ ಅರ್ಥ. ಅಮೆರಿಕವನ್ನು ಮೀರಿಸುವ ರೀತಿಯಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ 2021ರ ಆರಂಭದಲ್ಲಿ ಲಸಿಕೆ ಸಿಗಬಹುದು ಅಂತ ಕೇಂದ್ರ ಸರ್ಕಾರ ಹೇಳಿದೆ. 2021ರ ಆರಂಭದಲ್ಲಿ ಅಂದ್ರೆ ಜನವರಿ 1ರಂದೇ ಲಸಿಕೆ ಸಿಗುತ್ತೆ ಅಂತಲ್ಲ. ಜನವರಿ 1 ಅಥವಾ ನಂತರದ ದಿನಗಳಲ್ಲಿ ಅಂತರ್ಥ.

-masthmagaa.com

Contact Us for Advertisement

Leave a Reply