ಹರಿಯಾಣ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಬಿತಾಗೆ ಸ್ಥಾನ..!

ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 78 ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಕರ್ನಾಲ್‍ನಿಂದ ಮಹೋಹರ್ ಲಾಲ್ ಖಟ್ಟರ್, ಬರೌದಾದಿಂದ ಯೋಗೇಶ್ವರ್ ದತ್, ಪಿವುಹಾದಿಂದ ಸಂದೀಪ್ ಸಿಂಗ್, ದಾದರಿ ಕ್ಷೇತ್ರದಿಂದ ಬಬಿತಾ ಪೊಗಟ್ ಗೆ ಟಿಕೆಟ್ ನೀಡಲಾಗಿದೆ. ಕುಸ್ತಿಪಟು ಬಬಿತಾ ಪೊಗಟ್ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು.

ಇನ್ನು ಕಳೆದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ನರವೀರ್ ಸಿಂಗ್ ಅವರ ಬದಲಾಗಿ ಬಾದಶಾಪುರ ಕ್ಷೇತ್ರದಿಂದ ಯುವಮೋರ್ಚಾ ಅಧ್ಯಕ್ಷ ಮನೀಶ್ ಯಾದವ್‍ಗೆ ಟಿಕೆಟ್ ನೀಡಲಾಗಿದೆ.

ಹರಿಯಾಣದಲ್ಲಿ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ. 24ರಂದು ಫಲಿತಾಂಶ ಹೊರಬೀಳಲಿದೆ.

Contact Us for Advertisement

Leave a Reply