ಸೋನಿಯಾ ಗಾಂಧಿಯನ್ನು ಸತ್ತ ಇಲಿಗೆ ಹೋಲಿಸಿದ ಬಿಜೆಪಿ ಹಿರಿಯ ನಾಯಕ..!

ಹರಿಯಾಣ: ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಸೋನಿಯಾ ಗಾಂಧಿಯವರನ್ನು ಸತ್ತು ಹೋದ ಇಲಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ. ನಿನ್ನೆ ಹರಿಯಾಣದ ಸೋನಿಪತ್​ನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಗಾದಿಗೆ ರಾಜೀನಾಮೆ ನೀಡಿದ್ದರು. ಅಲ್ಲದೆ ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುತ್ತೇವೆ ಎಂದಿದ್ದರು. ಅವರ ಆ ನಿರ್ಧಾರವನ್ನು ನಾವು ಸ್ವಾಗತಿಸಿದ್ದೆವು. ಆದ್ರೆ 3 ತಿಂಗಳು ಇಡೀ ದೇಶಾದ್ಯಂತ ಅಧ್ಯಕ್ಷರನ್ನು ಹುಡುಕಿ ಹುಡುಕಿ ನಂತರ ಸೋನಿಯಾ ಗಾಂಧಿಯವರನ್ನೇ ಆಯ್ಕೆ ಮಾಡಲಾಗಿದೆ. ಇದು ಬೆಟ್ಟವನ್ನು ಕೊರೆದು ಇಲಿಯನ್ನು ಹೊರತೆಗೆದಂತಾಗಿದೆ. ಅದೂ ಕೂಡ ಸತ್ತು ಹೋಗಿರೋದು ಎಂದು ಹೇಳಿದ್ದರು.

ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ತುತ್ತಾಗಿದ್ದು, ಮನೋಹರ್ ಲಾಲ್ ಕಟ್ಟರ್ ಅವರ ಹೇಳಿಕೆ ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತೆ. ಕೂಡಲೇ ಬಿಜೆಪಿ ಸೋನಿಯಾ ಗಾಂಧಿ ಬಳಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Contact Us for Advertisement

Leave a Reply