ಪತಿ, ಮಗಳ ಎದುರೇ ಎಳೆದೊಯ್ದು ಮಹಿಳೆ ಮೇಲೆ ಗ್ಯಾಂಗ್ ರೇಪ್..!

ಪತಿ ಮತ್ತು ಮಗಳ ಜೊತೆ ಸೋನಿಪತ್ ಹೋಗುತ್ತಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ. ಹರಿಯಾಣದ ಮುರ್ತಲ್ ಬಳಿ ಈ ಘಟನೆ ನಡೆದಿದೆ. ದೆಹಲಿ ಮೂಲದ ಮಹಿಳೆ ಸೋನಿಪತ್‍ನಲ್ಲಿ ನೆಲೆಸಿದ್ದರು. ನಿನ್ನೆ ಬೆಳಗ್ಗಿನ ಜಾವ 3.30ಕ್ಕೆ ತನ್ನ ಪತಿ ಮತ್ತು ಮಗಳ ಜೊತೆ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದರು. ಆದ್ರೆ ಮುರ್ತಲ್ ಬಳಿ ಬರೋವಾಗ ಪೆಟ್ರೋಲ್ ಖಾಲಿಯಾಗಿದೆ. ಹೀಗಾಗಿ ಮೂವರೂ ನಡೆದುಕೊಂಡು ಸಾಗುತ್ತಿದ್ದರು. ಮಹಿಳೆ ಹಿಂದೆ ಸ್ವಲ್ಪ ನಿಧಾನವಾಗಿ ಬರುತ್ತಿದ್ದರು. ಈ ವೇಳೆ ಬಂದ ಟ್ರಕ್‍ನಲ್ಲಿದ್ದ ಮೂವರು ಮಹಿಳೆಯನ್ನು ಕಿಡ್ನಾಪ್ ಮಾಡಿ, ಬಲ್ಲಾಭಗಡ್‍ನತ್ತ ಕರೆದೊಯ್ದಿದ್ದಾರೆ. ಈ ವೇಳೆ ಮೂವರೂ ಸೇರಿಕೊಂಡು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ದೂರು ದಾಖಲಿಸಿರುವ ಮಹಿಳೆ ಪೊಲೀಸರಿಗೆ ಟ್ರಕ್‍ನ ನಂಬರ್ ಕೂಡ ನೀಡಿದ್ದಾರೆ. ಅಲ್ಲದೆ ಆರೋಪಿಗಳ ಹೆಸರು ವಿಜಯ್, ಸೋನು ಮತ್ತು ಸುಮೆರ್ ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇವರಲ್ಲಿ ವಿಜಯ್ ಈಗಾಗಲೇ ಸಿಕ್ಕಿಬಿದ್ದಿದ್ದು, ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Contact Us for Advertisement

Leave a Reply