ಒಂದೂವರೆ ವರ್ಷದ ಮಗಳನ್ನು ಕೊಂದು, 2 ದಿನ ಮನೆಯಲ್ಲೇ ಇಟ್ಟುಕೊಂಡ ತಂದೆ..!

ಹರಿಯಾಣದ ಪಲ್‍ಪಲ್‍ನಲ್ಲಿ ಮಾನವ ಕುಲವೇ ನಾಚಿಕೆ ಪಡುವಂತಹ ಘಟನೆ ನಡೆದಿದೆ. ಇಲ್ಲೊಬ್ಬ ಪಾಪಿ ತಂದೆ ತನ್ನ 2ನೇ ಹೆಂಡ್ತಿ ಜೊತೆ ಸೇರಿಕೊಂಡು ತನ್ನ ಒಂದೂವರೆ ವರ್ಷದ ಮಗಳನ್ನು ಕೊಂದಿದ್ದಾನೆ. ಶೇಖ್‍ಪುರದ ದಿಲೀಪ್ ಎಂಬುವವರು ತಮ್ಮ ಪತ್ನಿ ಪುಷ್ಪಾ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದ್ರೆ ಪುಷ್ಪಾ ಸಾವನ್ನಪ್ಪಿದ್ದರಿಂದ ದಿಲೀಪ್, ರಿತು ಎಂಬುವವರನ್ನು ಮದುವೆಯಾಗಿದ್ದರು.

ಆದ್ರೆ ರಿತುಗೆ 4 ತಿಂಗಳ ಹಿಂದೆ ಒಂದು ಮಗುವಾಗಿತ್ತು. ಇದಾದ ಬಳಿಕ ದಿಲೀಪ್ ರ ಮೊದಲ ಪತ್ನಿಯ ಮಗುವಿನ ಮೇಲೆ ದ್ವೇಷ ಶುರುವಾಗಿದೆ. ದಿಲೀಪ್ ಮತ್ತು ರಿತು ಇಬ್ಬರೂ ಮಗುವಿಗೆ ಥಳಿಸುತ್ತಿದ್ದರು. ಅದೇ ರೀತಿ ಸೆಪ್ಟೆಂಬರ್ 29ರಂದು ಥಳಿಸುವಾಗ ಮಗುವಿನ ಎದೆ ಮೇಲೆ ಕಾಲಿಟ್ಟಿದ್ದಾರೆ. ಇದ್ರಿಂದ ಮಗು ಸತ್ತು ಹೋಗಿದೆ. ನೈಟಿಯೊಂದರಲ್ಲಿ ಮಗುವಿನ ಹೆಣವನ್ನು ಸುತ್ತಿ ಕಪಾಟಿನಲ್ಲಿ 2 ದಿನಗಳ ಕಾಲ ಇಟ್ಟಿದ್ದಾರೆ.

ನಂತರ ಅಕ್ಟೋಬರ್ 1ರಂದು ಎಸೆಯಲು ಹೊರಗೆ ತಂದಾಗ ನಾಯಿಗಳು ಬೊಗಳಲು ಶುರು ಮಾಡಿವೆ. ಆಗ ನೈಟಿಯಲ್ಲಿ ಸುತ್ತಿದ ಹೆಣವನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದರು. ನಂತರ ಪೊಲೀಸರು ನೈಟಿಯ ಮೂಲಕ ಕೊಲೆಗಾರರನ್ನು ಪತ್ತೆ ಹಚ್ಚಿ ಕಂಬಿ ಹಿಂದೆ ತಳ್ಳಿದ್ದಾರೆ.

Contact Us for Advertisement

Leave a Reply