ಅಲೋಕ್ ಮೇಲೆ ಸಿಬಿಐ ದಾಳಿ ಅದ್ರೆ ನಾನೇನು ಮಾಡಲಿ: ಎಚ್‍ಡಿಕೆ ಸಿಟ್ಟು

KSRP ಎಡಿಜಿಪಿ ಅಲೋಕ್ ಕುಮಾರ್ ಅವರ ಮೇಲೆ ಸಿಬಿಐ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರ ಮನೆ ಮೇಲಾದ್ರೂ ಸಿಬಿಐ ಮಾಡಿಕೊಳ್ಳಲಿ. ನನ್ನನ್ನು ಯಾಕೆ ಕೇಳುತ್ತೀರಿ..? ನನಗೂ ಅದಕ್ಕೂ ಏನು ಸಂಬಂಧ..? ಎಲ್ಲರ ಅವಧಿಯಲ್ಲೂ ಫೋನ್ ಟ್ಯಾಪ್ ಆಗುತ್ತೆ. ಎಲ್ಲರ ಅವಧಿಯಲ್ಲೂ ನಡೆದ ಫೋನ್ ಟ್ಯಾಪಿಂಗ್ ಬಗ್ಗೆ ತನಿಖೆ ನಡೆಯಲಿ ಅಂದ್ರು. ಅಲ್ಲದೆ ಈ ದೇಶದಲ್ಲಿ ಯಾರನ್ನು ಬೇಕಾದರೂ ವಿಚಾರಣೆಗೆ ಒಳಪಡಿಸಬಹುದು. ನನಗ್ಯಾಕೆ ಗಾಬರಿ..? ನನ್ನ ತನಿಖೆ ಬರಲಿ ಅಂದ್ರು.

ಇಂದು ಬೆಳಗ್ಗೆ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಫೋನ್ ಟ್ಯಾಪಿಂಗ್‍ಗೆ ಬಳಸಲಾದ ಪೆನ್‍ಡ್ರೈವ್ ಅನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕುಮಾರಸ್ವಾಮಿ ಸರಿಯಾಗಿ ಸಾಲಮನ್ನಾ ಮಾಡಿಲ್ಲ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಬಗ್ಗೆ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ. ನನ್ನನ್ನು ಟೀಕಿಸುವವರಿಗೆ ಯೋಗ್ಯತೆ ಇಲ್ಲ. ನಾನು 14 ತಿಂಗಳಲ್ಲಿ ಏನು ಮಾಡಿದ್ದೇನೆ ಎಂದು ಬುಕ್ ಮಾಡಿ ಹಳ್ಳಿಹಳ್ಳಿಗೂ ತಲುಪಿಸುತ್ತೇನೆ ಅಂದ್ರು.

Contact Us for Advertisement

Leave a Reply