masthmagaa.com:

ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್ ಆಝಮ್ ತನಗೆ ಲೈಂಗಿಕ ಕಿರುಕುಳ ನೀಡಿ, ಗರ್ಭಪಾತ ಮಾಡಿಸಿದ್ದಾರೆ ಅಂತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ನಾನು ಮತ್ತು ಬಾಬರ್ ಆಝಮ್ ಒಂದೇ ಏರಿಯಾದವರು. ಶಾಲಾ ದಿನಗಳಲ್ಲೇ ಪರಿಚಿತರಾಗಿದ್ದೆವು. ನಮ್ಮಿಬ್ಬರ ನಡುವೆ ಒಳ್ಳೆಯ ಗೆಳೆತನವಿತ್ತು. 2010ರಲ್ಲಿ ಬಾಬರ್ ಆಝಮ್ ನನಗೆ ಪ್ರಪೋಸ್ ಮಾಡ್ಡ, ನಾನು ಕೂಡ ಓಕೆ ಎಂದೆ. ಬಳಿಕ​ ಮದುವೆಯಾಗುವ ಬಗ್ಗೆ ಮನೆಯಲ್ಲಿ ಹೇಳಿದಾಗ, ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದ್ರು. ಹೀಗಾಗಿ ನಾವು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ನಿರ್ಧರಿಸಿದೆವು. 2011ರಲ್ಲಿ ನಮ್ಮ ಮನೆಗೆ ಬಂದಿದ್ದ ಬಾಬರ್ ಆಝಮ್ ನನ್ನನ್ನ ಕರ್ಕೊಂಡ್​ ಹೋಗಿ ಬಾಡಿಗೆ ಮನೆಯಲ್ಲಿಟ್ಟ. ಅಲ್ಲಿ ನಾವಿಬ್ಬರೂ ಒಟ್ಟಿಗೆ ವಾಸವಿದ್ವಿ. ಆದ್ರೆ ಮದ್ವೆ ಮಾಡಿಕೊಳ್ಳೋಣ ಅಂದ್ರೆ, ನನ್ನ ಪರಿಸ್ಥತಿ ಈಗ ಸರಿಯಿಲ್ಲ ಮುಂದೆ ನೋಡೋಣ ಅಂತ ಹೇಳ್ತಿದ್ದ. ಕ್ರಿಕೆಟ್​ನಿಂದ ಹಿಡಿದು ಆತನ ಎಲ್ಲಾ ಖರ್ಚುಗಳನ್ನ ನಾನೇ ನೋಡಿಕೊಳ್ತಿದ್ದೆ. 2014ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬಳಿಕ ಆತನ ವರ್ತನೆ ಬದಲಾಯ್ತು. ಆದ್ರೆ ನಾನು ಮತ್ತೆ ಮನೆಗೆ ಹೋಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. 2016ರಲ್ಲಿ ನಾನು ಪ್ರೆಗ್ನೆಂಟ್ ಆದೆ. ಈ ಸುದ್ದಿ ಕೇಲಿ ಬಾಬರ್ ಆಝಮ್​ಗೆ ಶಾಕ್ ಆಯ್ತು. ಗರ್ಭಪಾತ ಮಾಡಿಸುಂತೆ ನನಗೆ ಟಾರ್ಚರ್ ಮಾಡಲು ಶುರು ಮಾಡ್ದ. ನನ್ನ ಬಳಿ ಬೇರೆ ಆಯ್ಕೆಗಳಿರಲಿಲ್ಲ. ಹೀಗಾಗಿ ಓಕೆ ಅಂದೆ. ಬಳಿಕ ನಿನ್ನ ಮನೆಗೆ ಹೋಗುವಂತೆ ಹೇಳ್ದ. ನಂತರವೂ ನನ್ನನ್ನ ಹಲವು ಕಡೆ ಕರೆಸಿಕೊಂಡು ಲೈಂಗಿಕ ಕಿರುಕುಳ ಕೊಟ್ಟ. ಆಸ್ಪತ್ರೆಗೆ ಕರೆದುಕೊಂಡ ಹೋದಾಗಲೂ ಪತ್ನಿ ಅಂತಾನೇ ಹೇಳಿಕೊಳ್ತಿದ್ದ. 2017ರಲ್ಲಿ ಬಾಬರ್ ಆಝಮ್ ವಿರುದ್ಧ ಪೊಲೀಸ್ ಕಂಪ್ಲೇಂಟ್ ಮಾಡ್ದೆ. ಈಗ ಬಂದು, ನಿನ್ನನ್ನ ಮದುವೆಯಾಗಲು ಆಗಲ್ಲ. ನೀನ್ ಏನ್ ಮಾಡ್ಕೋತಿಯಾ ಮಾಡ್ಕೋ. ಪೊಲೀಸರಿಗೆ ದೂರು ಕೊಟ್ರೆ ನಿನ್ನನ್ನ ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾನೆ. ಹೀಗಾಗಿ ನಾನು ಮಾಧ್ಯಮಗಳ ಮುಂದೆ ಬಂದಿದ್ದೀನಿ ಅಂತ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಾಕ್ಷ್ಯಗಳನ್ನ ಮಾಧ್ಯಮದವರಿಗೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply