ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅನಾರೋಗ್ಯ: ಗಣ್ಯರಿಂದ ಚೇತರಿಕೆಗೆ ಹಾರೈಕೆ

masthmagaa.com:

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವ್ರಿಗೆ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರಧಾನಿ ಮೋದಿ ಕೂಡಾ ಡಾಕ್ಟರ್ ಸಿಂಗ್ ಅವರ ಶೀಘ್ರ ಚೇತರಿಕೆ ಹಾರೈಸಿ ಟ್ವೀಟ್ ಮಾಡಿದ್ರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಮನಮೋಹನ್ ಸಿಂಗ್ ಆರೋಗ್ಯ ವಿಚಾರಸಿದ್ರು. 89 ವರ್ಷ ದಹಿರಿಯ ಜೀವ ಮನಮೋಹನ್ ಸಿಂಗ್ ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಅನ್ನೋ ಮಾಹಿತಿ ಏಮ್ಸ್ ನಿಂದ ಲಭ್ಯವಾಗ್ತಿದೆ. ಇವ್ರು UPA 1, UPA 2 ಅವಧಿಯಲ್ಲಿ, ಅಂದ್ರೆ 2004 ರಿಂದ 2014ರವೆರಗೆ 10 ವರ್ಷಗಳ ಕಾಲ ದೇಶದ ಪ್ರಧಾನಿ ಆಗಿದ್ರು. ಅದಕ್ಕೂ ಮೊದಲು 90ರ ದಶಕದಲ್ಲಿ ದೇಶದ ಹಣಕಾಸು ಮಂತ್ರಿ, ಅದಕ್ಕೂ ಮೊದಲು RBI ಗವರ್ನರ್ ಆಗಿ ದೇಶಕ್ಕೆ ಉನ್ನತ ಸೇವೆ ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply