ರಾಗಿಣಿ, ಸಂಜನಾಗೆ ಜಾಮೀನು ಇಲ್ಲ.. ಸದ್ಯಕ್ಕೆ ಜೈಲೇ ಗತಿ..!

masthmagaa.com:

ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರೋ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ವಿಚಾರದಲ್ಲಿ ಮತ್ತೆ ಹಿನ್ನಡೆಯಾಗಿದೆ. ಇಬ್ಬರ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್​ಡಿಪಿಎಸ್ ವಿಶೇಷ​ ಕೋರ್ಟ್​ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದೆ. ಇದರೊಂದಿಗೆ ಬೇಲ್ ಪಡೆದು ಜೈಲಿನಿಂದ ಹೊರಬರಬೇಕು ಅಂತ ಕಾಯ್ತಿದ್ದ ರಾಗಿಣಿ ಮತ್ತು ಸಂಜನಾ ಮತ್ತಷ್ಟು ದಿನ ಪರಪ್ಪನ ಅಗ್ರಹಾರದಲ್ಲೇ ಕಾಲ ಕಳೆಯಲಿದ್ದಾರೆ.

-masthmagaa.com

Contact Us for Advertisement

Leave a Reply