ದಸರಾಗೆ ಬರುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಭಾರತೀಯ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚನ್ನಹಳ್ಳಿ ಬಳಿ ಈ ಘಟನೆ ನಡೆದಿದೆ. ಮೈಸೂರು ದಸರಾದಲ್ಲಿ ಆಯೋಜಿಸಲಾಗಿರುವ ಏರ್ ಶೋನಲ್ಲಿ ಭಾಗಿಯಾಗಲು ಹೆಲಿಕಾಪ್ಟರ್ ಮೈಸೂರಿಗೆ ಹೊರಟಿತ್ತು. ಆದ್ರೆ ಚನ್ನಹಳ್ಳಿ ಬಳಿ ಬರುವಾಗ ಹೆಲಿಕಾಪ್ಟರ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹೀಗಾಗಿ ತಕ್ಷಣವೇ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಲಾಯ್ತು.

ಮೊದಲಿಗೆ ಗಾಬರಿಗೊಂಡ ಜನ ಆಮೇಲೆ ಓಡೋಡಿ ಬಂದು ಹೆಲಿಕಾಪ್ಟರ್ ನೋಡಲು ಮುಗಿಬಿದ್ರು. ನಂತರ ಕೆಲವರು ಹೆಲಿಕಾಪ್ಟರ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ್ರು. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಅಂತ ಸೇನೆ ಮಾಹಿತಿ ನೀಡಿದೆ.

Contact Us for Advertisement

Leave a Reply