ನಿತೀಶ್‌ ಸಂಪುಟದಲ್ಲಿ ಶೇ72ರಷ್ಟು ಸದಸ್ಯರು ಕ್ರಿಮಿನಿಲ್‌ ಹಿನ್ನೆಲೆಯುಳ್ಳವರು: ವರದಿ

masthmagaa.com:

ನನ್ನ ಇಷ್ಟಕ್ಕೆ ವಿರುದ್ಧವಾಗಿ ಆರ್‌ಸಿಪಿ ಸಿಂಗರನ್ನ ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು, ಜೆಡಿಯು ಪಕ್ಷ ಒಡೆಯುವ ದಾಳವಾಗಿ ಅವರನ್ನ ಬಳಸಿಕೊಳ್ಳೋಕೆ ಬಿಜೆಪಿ ಮುಂದಾಗಿತ್ತು ಅಂತ ಬಿಹಾರ ಸಿಎಂ ನಿತೀಶ್ ಕುಮಾರ್ ಆರೋಪ ಮಾಡಿದ್ರು. ಈ ಆರೋಪವನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಬಿಹಾರದ ರಾಜಕೀಯದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸೋಕೆ ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿತ್ತು. ಅಲ್ಲಿ ಅಮಿತ್‌ ಶಾ ಮಾತನಾಡಿ ನಿತೀಶ್‌ ಆರೋಪ ಶುದ್ದಸುಳ್ಳು ಅಂತ ಹೇಳಿದ್ದಾರೆ ಅಂತ ಮೂಲಗಳು ತಿಳಿಸಿವೆ. ಇತ್ತ ಬಿಹಾರದಲ್ಲಿ ರಚನೆಯಾಗಿರೋ ಹೊಸ ಸರ್ಕಾರದ ಸಂಪುಟ ಸದಸ್ಯರಲ್ಲಿ ಶೇ 72ರಷ್ಟು ಕ್ರಿಮಿನಲ್‌ ಹಿನ್ನೆಲೆಯುಳ್ಳವರು ಅಂತ ವರದಿಯೊಂದು ಹೇಳಿದೆ.

-masthmagaa.com

Contact Us for Advertisement

Leave a Reply