masthmagaa.com:

ಹಿಂದೂ ಧರ್ಮದವರು ದೇಶ ಭಕ್ತರಾಗಿರುತ್ತಾರೆ.. ದೇಶಭಕ್ತಿ ಅನ್ನೋದು ಅವರ ಕ್ಯಾರೆಕ್ಟರ್ ಮತ್ತು ನೇಚರ್​ನಲ್ಲೇ ಇರುತ್ತೆ.. ಹಿಂದೂಗಳು ಯಾವತ್ತೂ ದೇಶ ವಿರೋಧಿಗಳಾಗಲು ಸಾಧ್ಯವಿಲ್ಲ ಅಂತ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಜೆ.ಕೆ.ಬಜಾಜ್ ಮತ್ತು ಎಂ.ಡಿ. ಶ್ರೀನಿವಾಸ್ ಬರೆದ ‘ಮೇಕಿಂಗ್ ಆಫ್ ಎ ಹಿಂದೂ ಪೇಟ್ರಿಯಾಟ್: ಬ್ಯಾಗ್ರೌಂಡ್​ ಆಫ್ ಗಾಂಧೀಜೀಸ್​ ಹಿಂದ್ ಸ್ವರಾಜ್​’ ಪುಸ್ತಕ ಬಿಡುಗಡೆ ವೇಳೆ ಮೋಹನ್​ ಭಾಗವತ್ ಈ ರೀತಿ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ‘ವ್ಯಕ್ತಿಯ ಧರ್ಮದಿಂದಲೇ ದೇಶಭಕ್ತಿ ಹುಟ್ಟುತ್ತೆ ಅಂತ ಮಹಾತ್ಮ ಗಾಂಧೀಜಿ ಕೂಡ ತಮ್ಮ ಬರಹಗಳಲ್ಲಿ ಹೇಳಿದ್ದರು. ಗಾಂಧೀಜಿಗೆ ಧರ್ಮ ಮತ್ತು ದೇಶಭಕ್ತಿ ಎರಡೂ ಒಂದೇ ಆಗಿತ್ತು. ಹಿಂದೂ ಧರ್ಮದಲ್ಲಿ ಏಕತೆಯನ್ನ ನಂಬಲಾಗುತ್ತೆ. ಧರ್ಮಗಳ ನಡುವೆ ಇರುವ ಅಂತರವನ್ನ ಸಪರೇಟಿಸಂ ಅನ್ನೋಕ್ಕಾಗಲ್ಲ. ಗಾಂಧೀಜಿ ಪ್ರಕಾರ ಹಿಂದೂ ಧರ್ಮವು ಎಲ್ಲಾ ಧರ್ಮಗಳ ಧರ್ಮ’ ಅಂತ ಮೋಹನ್ ಭಾಗವತ್ ಹೇಳಿದ್ರು.

-masthmagaa.com

Contact Us for Advertisement

Leave a Reply