ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ಮೇಲೆ ದಾಳಿ ಮಾಡಿದ್ರೆ ನಾವ್‌ ಸುಮ್ನಿರಲ್ಲ: ಬೈಡನ್‌

masthmagaa.com:

ರಷ್ಯಾ ಆಕ್ರಮಣದ ಹಿನ್ನಲೆಯಲ್ಲಿ ನ್ಯಾಟೋ ಸೇರೋಕೆ ಅರ್ಜಿ ಸಲ್ಲಿಸಿರೊ ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ನಡೆಯನ್ನ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಐತಿಹಾಸಿಕ ಅಂತ ಬಣ್ಣಿಸಿದ್ದಾರೆ. ಜೊತೆಗೆ ಈ ಅರ್ಜಿ ಪ್ರಕ್ರಿಯೆ ನಡೆಯುವಾಗ್ಲೇ ಯಾರಾದ್ರೂ ಈ ಎರಡು ದೇಶಗಳ ಮೇಲೆ ಆಕ್ರಮಣ ಮಾಡಿದ್ರೆ ನಾವು ಅವ್ರ ವಿರುದ್ದ ಹೋರಾಡಿ ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ಗಳಿಗೆ ಸಪೋರ್ಟ್‌ ಮಾಡ್ತೀವಿ ಅಂತ ಹೇಳಿದ್ದಾರೆ.‌ ಇನ್ನೊಂದ್‌ ಕಡೆ ಈ ಎರಡು ದೇಶಗಳು ನ್ಯಾಟೋ ಮೈತ್ರಿಕೂಟ ಸೇರೋದನ್ನ ವಿರೋಧಿಸ್ತಿರೋ ಟರ್ಕಿ ಕಳವಳವನ್ನ ಬಗೆಹರಿಸ್ಬೋದು ಅಂತ ಬೈಡನ್‌ರ ಉನ್ನತ ಸಲಹೆಗಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply