ಕುಂಭಮೇಳ ಬೆನ್ನಲ್ಲೇ ಚಾರ್​ ಧಾಮ್ ಯಾತ್ರೆ!?

masthmagaa.com:

ಉತ್ತರಾಖಂಡ್: ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಕುರಿತು ಉತ್ತರಾಖಂಡ್ ಸರ್ಕಾರಕ್ಕೆ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ರಾಜ್ಯ ಸರ್ಕಾರದ ಕೊರೋನಾ ನಿರ್ವಹಣೆ ಕುರಿತು ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ವು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್​​, ಕೊರೋನಾ ನಡುವೆ ಕುಂಭಮೇಳ ಆಯೋಜಿಸುವ ಮೂಲಕ ರಾಜ್ಯ ಸರ್ಕಾರ ನಗೆಪಾಟಲಿಗೆ ಗುರಿಯಾಗಿದೆ ಅಂತ ಹೇಳಿದೆ.

ಜೊತೆಗೆ ಮುಂದಿನ ತಿಂಗಳು ನಡೆಯಲಿರುವ ಚಾರ್ ಧಾಮ್ ಯಾತ್ರೆ ಕುರಿತು ಪ್ರಸ್ತಾಪಿಸಿರುವ ಕೋರ್ಟ್​, ತುಂಬಾ ಅಪಾಯಕಾರಿಯಾಗಲಿದೆ ಅಂತ ಎಚ್ಚರಿಸಿದೆ. ಅದಕ್ಕೆ ಪ್ರತಿಕ್ರಿಯಿಸಿರೋ ಸರ್ಕಾರ, ಚಾರ್​ ಧಾಮ್ ಯಾತ್ರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ತೀವಿ. ಶೀಘ್ರದಲ್ಲೇ ಆ ಕಾರ್ಯವಿಧಾನಗಳೊಂದಿಗೆ ನಿಮ್ಮ ಮುಂದೆ ಬರ್ತೀವಿ ಅಂತ ಹೇಳಿದೆ.  ಮೇ 14ರಿಂದ ಚಾರ್ ಧಾಮ್ ಯಾತ್ರೆ ಶುರುವಾಗೋ ಸಾಧ್ಯತೆ ಇದೆ.

ಹಿಂದಿ ಭಾಷೆಯಲ್ಲಿ “ಚಾರ್” ಎಂದರೆ 4 ಹಾಗೂ “ಧಾಮ್” ಎಂದರೆ ನೆಲೆ ಅಂತ ಅರ್ಥ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ 4 ಪುಣ್ಯ ಸ್ಥಳಗಳ ದರ್ಶನ ಅಂತ ಅರ್ಥೈಸಿಕೊಳ್ಳಬಹುದು. ರಾಮೇಶ್ವರಂ, ಬದ್ರಿನಾಥ, ದ್ವಾರಕ ಮತ್ತು ಪುರಿ ಜಗನ್ನಾಥ ಈ ನಾಲ್ಕು ಸ್ಥಳಗಳು.. ಜೀವಂತವಾಗಿರುವಾಗ ಒಮ್ಮೆಯಾದ್ರೂ ಈ ಕ್ಷೇತ್ರಗಳ ದರ್ಶನ ಪಡೆದ್ರೆ ಪಾಪವೆಲ್ಲಾ ತೊಳೆದು ಹೋಗುತ್ತೆ ಅನ್ನೋ ನಂಬಿಕೆ ಇದೆ.

ಅದೇ ರೀತಿ ಉತ್ತರಾಖಂಡ್​​ನಲ್ಲಿ ಚೋಟಾ ಚಾರ್ ಧಾಮ್​ ಇದೆ. ಅದೇ ಬದ್ರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ.. ಪ್ರತಿ ವರ್ಷವೂ ಈ ಸ್ಥಳಗಳಿಗೆ ಅಸಂಖ್ಯಾತ ಭಕ್ತರು ಯಾತ್ರೆ ಕೈಗೊಳ್ತಾರೆ..

Contact Us for Advertisement

Leave a Reply