ಚೀನಾ ವಿರುದ್ಧ ಪ್ರತಿಭಟನೆ ಮಾಡಿದವರಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

masthmagaa.com:

ಚೀನಾದ ವಿಶೇಷ ಆಡಳಿತ ಪ್ರದೇಶ ಎನಿಸಿಕೊಂಡಿರೋ ಹಾಂಗ್​ ಕಾಂಗ್​ನಲ್ಲಿ 2019ರಲ್ಲಿ ಸರ್ಕಾರದ ವಿರುದ್ಧ, ಪ್ರಜಾಪ್ರಭುತ್ವ ಪರವಾಗಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಚೀನಾ ಹಿಡಿತದಿಂದ ಮುಕ್ತವಾಗಿ ಸ್ವತಂತ್ರ ದೇಶವಾಗುವ ಉದ್ದೇಶ ಪ್ರತಿಭಟನಾಕಾರರದ್ದು ಆಗಿತ್ತು. ಹೀಗೆ ಪ್ರತಿಭಟನೆಯಲ್ಲಿ ಭಾಗವಹಿಸಿ, ಜನರನ್ನ ಸೇರಿಸಿದ ಆರೋಪದಲ್ಲಿ ಹಾಂಗ್​ ಕಾಂಗ್​ನ ಮೀಡಿಯಾ ಟೈಕೂನ್ ಎನಿಸಿಕೊಂಡಿರೋ ಜಿಮ್ಮಿ ಲೈ ಮತ್ತು ಇತರ 9 ಜನ ತಪ್ಪಿತಸ್ಥರು ಅಂತ ಈ ಹಿಂದೆ ಕೋರ್ಟ್ ತೀರ್ಪು ನೀಡಿತ್ತು. ಇವತ್ತು ಅವರಿಗೆಲ್ಲಾ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಅಂದ್ಹಾಗೆ ಜಿಮ್ಮಿ ಲೈ ಕಳೆದ ವರ್ಷದ ಡಿಸೆಂಬರ್​ನಿಂದಲೂ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಗಳು ತಿರಸ್ಕೃತಗೊಳ್ಳುತ್ತಾ ಬಂದಿವೆ. ಇದೀಗ ಅವರು ಮತ್ತು ಇತರ 9 ಜನರಿಗೆ ಶಿಕ್ಷೆ ಪ್ರಕಟವಾಗಲಿದೆ. ಗರಿಷ್ಟ ಶಿಕ್ಷೆಯ ಪ್ರಮಾಣ 5 ವರ್ಷ ಜೈಲು ಶಿಕ್ಷೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply